ಸತತ ಸೋಲಿನಿಂದ ಬೆಂದ ಕಿಂಗ್ಸ್‌ ಇಲೆವನ್‌ಗೆ ಡೆಲ್ಲಿ ವಿರುದ್ಧ ಜಯ

ಭಾನುವಾರ, 8 ಮೇ 2016 (13:59 IST)
ಸತತ ಸೋಲಿನ ಸರಪಣಿಯಲ್ಲಿ ಬೆಂದುಹೋಗಿದ್ದ ಕಿಂಗ್ಸ್ ಇಲೆವನ್ ಪಂಜಾಬ್ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಜಯಗಳಿಸುವ ಮೂಲಕ ಸಮಾಧಾನದ ನಿಟ್ಟುಸಿರು ಬಿಟ್ಟಿದೆ.

ಪಂಜಾಬ್ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವನ್ ಪರ ಸ್ಟಾಯಿನಿಸ್ 52 ರನ್ ಮತ್ತು ವೃದ್ಧಿಮಾನ್ ಸಹಾ ಬಿರುಸಿನ 33 ಎಸೆತಗಳಿಗೆ 52 ರನ್ ನೆರವಿನಿಂದ  5 ವಿಕೆಟ್ ಕಳೆದುಕೊಂಡು 181 ರನ್ ಬಾರಿಸಿತು.

ಡೆಲ್ಲಿ ಪರ ಕ್ರಿಸ್ ಮೋರಿಸ್ ಎರಡು ವಿಕೆಟ್ ಕಬಳಿಸಿದರು. ನಂತರ ಆಡಲಿಳಿದ ಡೆಲ್ಲಿ ಡೇರ್‌ಡೆವಿಲ್ಸ್  ಮಾರ್ಕಸ್ ಸ್ಟಾಯಿನಸ್ ಅವರ ಮಾರಕ ಬೌಲಿಂಗ್ ದಾಳಿಗೆ ಶರಣಾಗಿ 5 ವಿಕೆಟ್ ಕಳೆದುಕೊಂಡು 172 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.   ಸ್ಟಾಯಿನಸ್ ಮೂರು ವಿಕೆಟ್ ಮತ್ತು ಸಂದೀಪ್ ಶರ್ಮಾ ಹಾಗೂ ಕೆ.ಸಿ. ಕಾರ್ಯಪ್ಪ ತಲಾ ಒಂದು ವಿಕೆಟ್ ಕಬಳಿಸಿದರು. 

ವೆಬ್ದುನಿಯಾವನ್ನು ಓದಿ