ಆರ್ ಸಿಬಿ ಸೇರಲು ಕೆಎಲ್ ರಾಹುಲ್ ಗಿದೆ ಈ ಒಂದು ಅಡ್ಡಿ

Krishnaveni K

ಬುಧವಾರ, 18 ಸೆಪ್ಟಂಬರ್ 2024 (09:21 IST)
ಬೆಂಗಳೂರು: ಮುಂದಿನ ಐಪಿಎಲ್ ಮೆಗಾ ಹರಾಜಿನಲ್ಲಿ ಕೆಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಳ್ಳಲು ಒಂದು ಅಡ್ಡಿಯಿದೆ. ಇದನ್ನು ನಿವಾರಿಸಿಕೊಂಡರೆ ಅವರು ಆರ್ ಸಿಬಿ ಸೇರಬಹುದು.

ಸದ್ಯಕ್ಕೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿರುವ ಕೆಎಲ್ ರಾಹುಲ್ ಮುಂದಿನ ಬಾರಿ ಆರ್ ಸಿಬಿ ಸೇರಿದರೂ ಅಚ್ಚರಿಯಿಲ್ಲ. ಈ ಬಗ್ಗೆ ಸಂದರ್ಶನವೊಂದರಲ್ಲಿ ಅವರೇ ಸುಳಿವು ನೀಡಿದ್ದಾರೆ. ಜೊತೆಗೆ ರಾಹುಲ್ ಎಲ್ಲೇ ಹೋದರೂ ಆರ್ ಸಿಬಿ ಫ್ಯಾನ್ಸ್ ನಮ್ಮ ತಂಡಕ್ಕೆ ಬನ್ನಿ ಎಂದು ಆಹ್ವಾನಿಸುತ್ತಿದ್ದಾರೆ.

ಒಂದು  ವೇಳೆ ರಾಹುಲ್ ಆರ್ ಸಿಬಿಗೆ ಬಂದರೆ ಅವರಿಗೆ ನಾಯಕನ ಪಟ್ಟ ಸಿಗುವುದು ಖಚಿತ ಎನ್ನಲಾಗುತ್ತಿದೆ. ಆದರೆ ರಾಹುಲ್ ಗೆ ನೇರವಾಗಿ ಆರ್ ಸಿಬಿ ಫ್ರಾಂಚೈಸಿ ಸೇರಿಕೊಳ್ಳಲು ನಿಯಮ ಅಡ್ಡಿಯಾಗಲಿದೆ. ಐಪಿಎಲ್ ನಿಯಮದ ಪ್ರಕಾರ ಆರ್ ಸಿಬಿ ನೇರವಾಗಿ ರಾಹುಲ್ ರನ್ನು ಖರೀದಿ ಮಾಡಲು ಸಾಧ್ಯವಿಲ್ಲ.

ಅದರ ಬದಲಾಗಿ ಲಕ್ನೋದಿಂದ ಕೆಎಲ್ ರಾಹುಲ್ ರಿಲೀಸ್ ಆದ ಬಳಿಕ ಹರಾಜಿನ ಮೂಲಕವೇ ಖರೀದಿ ಮಾಡಬೇಕಾಗುತ್ತದೆ. ಮುಂದಿನ ವರ್ಷ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿರುವ ಕಾರಣ ಈ ನಿಯಮವಿರಲಿದೆ. ಒಂದು ವೇಳೆ ಮಿನಿ ಹರಾಜು ಪ್ರಕ್ರಿಯೆಯಾಗಿದ್ದರೆ ಆರ್ ಸಿಬಿ ನೇರವಾಗಿ ಟ್ರೇಡಿಂಗ್ ಮಾಡಿ ರಾಹುಲ್ ರನ್ನು ಖರೀದಿಸಬಹುದಿತ್ತು. ಆದರೆ ಹರಾಜು ಪ್ರಕ್ರಿಯೆ ಮೂಲಕ ಖರೀದಿ ಮಾಡಬೇಕೆಂದರೆ ಅದು ಸುಲಭವಲ್ಲ. ಯಾರು ಹೆಚ್ಚು ಬಿಡ್ಡಿಂಗ್ ಮಾಡುತ್ತಾರೋ ಆ ತಂಡದ ಪಾಲಾಗಬೇಕಾಗುತ್ತದೆ. ಸದ್ಯಕ್ಕೆ ರಾಹುಲ್ ಗಿರುವ ಬೇಡಿಕೆ ನೋಡಿದರೆ ಹರಾಜಿಗಿಳಿದರೆ ಅವರನ್ನು ಯಾವ ತಂಡವೂ ಖರೀದಿಸಲು ಆಸಕ್ತಿ ತೋರಬಹುದು. ಹೀಗಾಗಿ ಅವರು ಆರ್ ಸಿಬಿ ಸೇರಲು ಸಾಕಷ್ಟು ಅಡೆತಡೆಗಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ