ನಟಿ ಜತೆ ಸಿಕ್ಕಿಬಿದ್ದ ಕೆಎಲ್ ರಾಹುಲ್!
ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನವಿತ್ತಿದ್ದ ರಾಹುಲ್ ಈಗ ದೊಡ್ಡ ಸ್ಟಾರ್ ಬ್ಯಾಟ್ಸ್ ಮನ್ ಆಗಿದ್ದಾರೆ. ಇದೀಗ ನಟಿ ನಿಧಿ ಅಗರ್ವಾಲ್ ಜತೆಗೆ ರಾಹುಲ್ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಖುಷಿ ಖುಷಿಯಾಗಿ ಕಳೆಯುತ್ತಿರುವ ಕ್ಷಣಗಳನ್ನು ಅವರ ಅಭಿಮಾನಿಗಳು ಇನ್ ಸ್ಟಾಗ್ರಾಂ ಪುಟದಲ್ಲಿ ಹರಿಯಬಿಟ್ಟಿದ್ದಾರೆ.
ಇದೀಗ ರಾಹುಲ್ ಹೆಸರು ನಿಧಿ ಜತೆ ಥಳುಕು ಹಾಕಿಕೊಂಡಿದ್ದು, ಇವರಿಬ್ಬರೂ ಲವ್ವಲ್ಲಿ ಬಿದ್ದಿದ್ದರಾ ಅಥವಾ ಕೇವಲ ಸ್ನೇಹನಾ ಎಂಬ ಅನುಮಾನ ಮೂಡಿಸಿದೆ. ಅಂತೂ ಟೀಂ ಇಂಡಿಯಾದ ಮೋಸ್ಟ್ ಬ್ಯಾಚ್ಯುಲರ್ ರಾಹುಲ್ ಹುಡುಗಿ ಜತೆ ಓಡಾಡುತ್ತಿರುವುದಂತೂ ನಿಜ.