KL Rahul: ಕೆಎಲ್ ರಾಹುಲ್ ಫ್ಯಾನ್ಸ್ ಗೆ ಭಾರೀ ನೋವು: ನಿಮ್ಮನ್ನು ನಮ್ಮ ಶತ್ರು ಅಂತ ನೋಡ್ಬೇಕಲ್ಲಾ ಗುರೂ..

Krishnaveni K

ಗುರುವಾರ, 10 ಏಪ್ರಿಲ್ 2025 (14:25 IST)
Photo Credit: X
ಬೆಂಗಳೂರು: ಐಪಿಎಲ್ 2025 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದೆ. ಆದರೆ ಆರ್ ಸಿಬಿ ಅಭಿಮಾನಿಗಳಿಗೆ ನಮ್ಮ ಕನ್ನಡದ ಹುಡುಗ ಕೆಎಲ್ ರಾಹುಲ್ ರನ್ನು ಶತ್ರು ಥರಾ ನೋಡ್ಬೇಕಲ್ಲಾ ಅನ್ನೋದೇ ಬೇಜಾರು.

ಎಲ್ಲರಿಗೂ ಗೊತ್ತಿರುವ ಹಾಗೆ, ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಆದರೆ ಆರ್ ಸಿಬಿಯಲ್ಲೇ ಅವರಿಗೆ ಅನೇಕ ಅಭಿಮಾನಿಗಳಿದ್ದಾರೆ. ಕಾರಣ, ಅವರು ನಮ್ಮ ಕನ್ನಡದ ಪ್ರತಿಭೆ. ಇಲ್ಲಿಯೇ ಆಡಿ ಬೆಳೆದವರು.

ಈ ಬಾರಿ ಮೆಗಾ ಹರಾಜಿನಲ್ಲಿ ರಾಹುಲ್ ಆರ್ ಸಿಬಿ ತಂಡಕ್ಕೆ ಬರಬೇಕು ಎಂಬುದು ಅಭಿಮಾನಿಗಳ ಬಯಕೆಯಾಗಿತ್ತು. ಆದರೆ ಆರ್ ಸಿಬಿ ಅವರನ್ನು ಕೈ ಬಿಟ್ಟಿತು. ಇದರ ನೋವು ಅಭಿಮಾನಿಗಳಿಗಿದೆ. ಈ ನಡುವೆ ಅವರು ಡೆಲ್ಲಿ ತಂಡದ ಪಾಲಾದರು.

ಈ ಹಿಂದೆ ಅವರು ಲಕ್ನೋ ತಂಡದಲ್ಲಿದ್ದರು. ಪ್ರತೀ ಬಾರಿಯೂ ಆರ್ ಸಿಬಿ ಅಭಿಮಾನಿಗಳಿಗೆ ಕೆಎಲ್ ರಾಹುಲ್ ರನ್ನು ಬೇರೆ ತಂಡದಲ್ಲಿ ಆಡುವುದನ್ನು ನೋಡಲು ಬೇಸರವಾಗುತ್ತದೆ. ಇದೇ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನೀವು ನಮ್ಮ ಆರ್ ಸಿಬಿಯಲ್ಲಿರಬೇಕಿತ್ತು. ಈಗ ಡೆಲ್ಲಿ ತಂಡದಲ್ಲಿದ್ದು ನಿಮ್ಮನ್ನು ಶತ್ರು ಥರಾ ನೋಡಬೇಕಾಗಿ ಬಂತಲ್ಲ ಗುರೂ.. ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ