ಲಂಡನ್ ನಲ್ಲಿ ಮಾಡಿದ್ರೇನು, ವಯಸ್ಸಾದ್ರೇನು ವಿರಾಟ್ ಕೊಹ್ಲಿ ಫಿಟ್ನೆಸ್ ಟೆಸ್ಟ್ ರಿಸಲ್ಟ್ ನೋಡಿ

Krishnaveni K

ಗುರುವಾರ, 4 ಸೆಪ್ಟಂಬರ್ 2025 (11:43 IST)

ಲಂಡನ್: ಟೀಂ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಲು ರೆಡಿಯಾಗಿರುವ ವಿರಾಟ್ ಕೊಹ್ಲಿ ಲಂಡನ್ ನಲ್ಲಿಯೇ ಫಿಟ್ನೆಸ್ ಪರೀಕ್ಷೆಗೊಳಗಾಗಿದ್ದಾರೆ. ಯೋ ಯೋ ಟೆಸ್ಟ್ ನಲ್ಲಿ ಕೊಹ್ಲಿ ಪಡೆದ ಸ್ಕೋರ್ ಯುವಕರನ್ನೂ ನಾಚಿಸುವಂತಿದೆ.

ಸದ್ಯಕ್ಕೆ ಲಂಡನ್ ವಾಸಿಯಾಗಿರುವ ವಿರಾಟ್ ಕೊಹ್ಲಿಗೆ ಬಿಸಿಸಿಐ ಸ್ಪೆಷಲ್ಲಾಗಿ ಅಲ್ಲಿಯೇ ಫಿಟ್ನೆಸ್ ಪರೀಕ್ಷೆಗೊಳಗಾಗುವ ಅವಕಾಶ ನೀಡಿದೆ. ಇದುವರೆಗೆ ಯಾವ ಆಟಗಾರನಿಗೂ ವಿದೇಶದಲ್ಲಿ ಫಿಟ್ನೆಸ್ ಪರೀಕ್ಷೆಗೊಳಗಾಗುವ ಅದೃಷ್ಟ ಇರಲಿಲ್ಲ. ಆದರೆ ಕೊಹ್ಲಿಗೆ ಮಾತ್ರ ಬಿಸಿಸಿಐ ಈ ವಿಶೇಷ ಸವಲತ್ತು ನೀಡಿತ್ತು. ಇದು ಸ್ವಲ್ಪ ಮಟ್ಟಿಗೆ ಟೀಕೆಗೂ ಕಾರಣವಾಗಿತ್ತು.

ಆದರೆ ಫಿಟ್ನೆಸ್ ಟೆಸ್ಟ್ ನಲ್ಲಿ ಕೊಹ್ಲಿ 21.6 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಇದು ಯುವ ಕ್ರಿಕೆಟಿಗರನ್ನೂ ನಾಚಿಸುವಂತಹ ಸ್ಕೋರ್ ಆಗಿದೆ. ಇದು ಕೊಹ್ಲಿಯದ್ದೂ ಬೆಸ್ಟ್ ಸಾಧನೆಯಾಗಿದೆ. ಇಷ್ಟು ದಿನ ಕ್ರಿಕೆಟ್ ನಿಂದ ದೂರವುಳಿದರೂ ಕೊಹ್ಲಿಯ ಫಿಟ್ನೆಸ್ ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

ಇನ್ನು, ಈಗಾಗಲೇ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಬಹುತೇಕ ಕ್ರಿಕೆಟಿಗರು ಬೆಂಗಳೂರಿನಲ್ಲಿ ಫಿಟ್ನೆಸ್ ಪರೀಕ್ಷೆಗೊಳಗಾಗಿದ್ದು ಎಲ್ಲರೂ ಪಾಸ್ ಮಾಡಿಕೊಂಡರೂ ಕೊಹ್ಲಿಯಷ್ಟು ಅಂಕ ಬಂದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ