ಕೆಎಲ್ ರಾಹುಲ್ ಗೆ ಉಪನಾಯಕನ ಪಟ್ಟ
ಬಾಂಗ್ಲಾದೇಶದ ವಿರುದ್ಧದ ಪಂದ್ಯದ ವೇಳೆ ಉಪನಾಯಕ ಹಾರ್ದಿಕ್ ಪಾಂಡ್ಯ ಕಾಲಿಗೆ ಏಟು ಮಾಡಿಕೊಂಡಿದ್ದರು. ಪರಿಣಾಮ ಅವರು ಈ ವಿಶ್ವಕಪ್ ನಿಂದಲೇ ಹೊರನಡೆಯಬೇಕಾಗಿ ಬಂದಿದೆ.
ಇದೀಗ ಅವರ ಸ್ಥಾನಕ್ಕೆ ವಿಕೆಟ್ ಕೀಪರ್ ಬ್ಯಾಟಿಗ ಕೆಎಲ್ ರಾಹುಲ್ ರನ್ನು ಉಪನಾಯಕನಾಗಿ ಬಿಸಿಸಿಐ ನೇಮಕ ಮಾಡಿದೆ. ರಾಹುಲ್ ವಿಕೆಟ್ ಹಿಂದೆ ನಿಂತು ಡಿಆರ್ ಎಸ್ ವಿಚಾರದಲ್ಲಿ ರೋಹಿತ್ ಶರ್ಮಾಗೆ ಕರಾರುವಾಕ್ ನಿರ್ಣಯ ತೆಗೆದುಕೊಳ್ಳುವಲ್ಲಿ ತಕ್ಕ ಸಲಹೆ ನೀಡುತ್ತಿರುತ್ತಾರೆ. ಅಲ್ಲದೆ, ತಂಡದ ಅನುಭವಿ ಆಟಗಾರನಾಗಿರುವ ಕಾರಣಕ್ಕೆ ಅವರನ್ನು ಉಪನಾಯಕನಾಗಿ ನೇಮಿಸಲಾಗಿದೆ.