ಕ್ರಿಕೆಟಿಗ ವಾಷಿಂಗ್ಟನ್ ಸುಂದರ್ ಎಷ್ಟು ಚೆಂದ ಕನ್ನಡ ಮಾತಾಡ್ತಾರೆ ನೋಡಿ

Krishnaveni K

ಗುರುವಾರ, 11 ಸೆಪ್ಟಂಬರ್ 2025 (08:55 IST)
Photo Credit: Instagram
ಚೆನ್ನೈ: ಟೀಂ ಇಂಡಿಯಾ ಕ್ರಿಕೆಟಿಗ ವಾಷಿಂಗ್ಟನ್ ಸುಂದರ್ ಮೂಲತಃ ತಮಿಳುನಾಡಿನವರು. ಹಾಗಿದ್ದರೂ ಎಷ್ಟು ಚೆಂದ ಕನ್ನಡ ಮಾತನಾಡ್ತಾರೆ ಗೊತ್ತಾ? ಅವರ ಲೇಟೆಸ್ಟ್ ಇನ್ ಸ್ಟಾಗ್ರಾಂ ಪೋಸ್ಟ್ ಒಂದು ಕನ್ನಡ ಪ್ರೀತಿಯನ್ನು ಬಹಿರಂಗಪಡಿಸಿದೆ.

ಟೀಂ ಇಂಡಿಯಾದಿಂದ ಬಿಡುವು ಪಡೆದಿರುವ ವಾಷಿಂಗ್ಟನ್ ಸುಂದರ್ ಇನ್ ಸ್ಟಾಗ್ರಾಂನಲ್ಲಿ ಪ್ರಯಾಣವೊಂದರ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ನಮ್ಮ ಕರ್ನಾಟಕ ನಂದಿ ಹಿಲ್ಸ್ ಗೆ ಅವರು ಭೇಟಿ ನೀಡಿರುವ ವಿಡಿಯೋ ಇದಾಗಿದೆ.

ಅವರ ಈ ಪೋಸ್ಟ್ ನಲ್ಲಿ ಅವರು ಸ್ಥಳೀಯ ವ್ಯಾಪಾರೀ ಮಹಿಳೆಯೊಂದಿಗೆ ಪಕ್ಕಾ ಕನ್ನಡದಲ್ಲೇ ಮಾತನಾಡುತ್ತಾರೆ. ನಂದಿ ಹಿಲ್ಸ್ ಸೌಂದರ್ಯದ ಜೊತೆಗೆ ಅವರ ಕನ್ನಡದ ಮಾತುಗಳೂ ಕೇಳುವುದು ಹಿತವಾಗಿದೆ. ಜೋಳ ಸುಡುವ ಮಹಿಳಾ ವ್ಯಾಪಾರಿಯೊಬ್ಬರ ಬಳಿ ವಾಷಿಂಗ್ಟನ್ ಕನ್ನಡದಲ್ಲೇ ವ್ಯವಹರಿಸುತ್ತಾರೆ.

ಅಕ್ಕಾ ನೀವು ಕ್ರಿಕೆಟ್ ನೋಡ್ತೀರಾ ಎಂದೂ ಕನ್ನಡದಲ್ಲೇ ಕೇಳುತ್ತಾರೆ. ಆದರೆ ಆ ಮಹಿಳೆ ಕ್ರಿಕೆಟ್ ನೋಡಲ್ಲ, ಸೀರಿಯಲ್ ಮಾತ್ರ ಎನ್ನುತ್ತಾರೆ. ಆಕೆಯಿಂದ ಸುಟ್ಟ ಜೋಳ ಖರೀದಿಸಿದ ಬಳಿಕ ಥ್ಯಾಂಕ್ಯೂ ಅಕ್ಕಾ ಎಂದು ಕನ್ನಡದಲ್ಲೇ ವ್ಯವಹರಿಸುತ್ತಾರೆ. ‘ಕೆಎಲ್ ರಾಹುಲ್ ಹೇಳುತ್ತಿದ್ದರು, ಚೆನ್ನೈಗಿಂತಲೂ ಬೆಂಗಳೂರಿನ ಪ್ರಕೃತಿ ಸೌಂದರ್ಯ ಸಖತ್ ಆಗಿದೆ ಅಂತ. ಆದರೆ ನಾನು ನಂಬಿರಲಿಲ್ಲ. ಆದರೆ ಈವತ್ತು ನಂದಿ ಹಿಲ್ಸ್ ನೋಡಿದ ಮೇಲೆ ಇದನ್ನು ಒಪ್ಪಲೇಬೇಕು’ ಎನ್ನುತ್ತಾರೆ. ಈ ಟ್ರಾವೆಲ್ ವ್ಲಾಗ್ ನ್ನು ಅವರು ತಮ್ಮ ಯೂ ಟ್ಯೂಬ್ ಚಾನೆಲ್ ನಲ್ಲಿ ಹಾಕಿಕೊಂಡಿದ್ದು, ಈ ಪೋಸ್ಟ್ ಗೆ ಕನ್ನಡದ ಪ್ರೇಮಲೋಕ ಹಾಡನ್ನು ಹಾಕಿಕೊಂಡಿದ್ದಾರೆ.


 
 
 
 
View this post on Instagram
 
 
 
 
 
 
 
 
 
 
 

A post shared by Washington Sundar (@washisundar555)

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ