ಗುರು ದ್ರಾವಿಡ್ ಕಾರ್ಯವೈಖರಿ ವಿವರಿಸಿದ ಕೆಎಲ್ ರಾಹುಲ್

ಮಂಗಳವಾರ, 16 ನವೆಂಬರ್ 2021 (10:06 IST)
ಮುಂಬೈ: ಟೀಂ ಇಂಡಿಯಾ ನೂತನ ಕೋಚ್ ಆಗಿ ಆಯ್ಕೆಯಾಗಿರುವ ರಾಹುಲ್ ದ್ರಾವಿಡ್ ಬಗ್ಗೆ ಕೆಎಲ್ ರಾಹುಲ್ ಮಾತನಾಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ನಾಳೆಯಿಂದ ಆರಂಭವಾಗಲಿರುವ ಟಿ20 ಸರಣಿಗೆ ಮುನ್ನ ರಾಹುಲ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಕೂಲ್ ಆಗಿರುವ ನಾಯಕ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಜೊತೆ ಕೆಲಸ ಮಾಡುವುದೇ ಖುಷಿ ಎಂದಿದ್ದಾರೆ.

ದ್ರಾವಿಡ್ ಗರಡಿಯಲ್ಲಿ ಭಾರತ ಎ ತಂಡದಲ್ಲಿ ಆಡಿ ಅನುಭವವಿರುವ ಕೆಎಲ್ ರಾಹುಲ್ ಅವರನ್ನು ತಮ್ಮ ಗುರು ಎಂದೇ ಪರಿಗಣಿಸುತ್ತಾರೆ. ಹೀಗಾಗಿ ಈಗ ಮತ್ತೆ ದ್ರಾವಿಡ್ ಕೋಚ್‍ ಆಗಿ ಅವರ ಜೊತೆಗೆ ಕೆಲಸ ಮಾಡುವುದು ಅದೃಷ್ಟ ಎಂದಿದ್ದಾರೆ.

‘ದ್ರಾವಿಡ್ ಡ್ರೆಸ್ಸಿಂಗ್ ರೂಂ ವಾತಾವರಣವನ್ನು ಕೂಲ್ ಆಗಿಡುತ್ತಾರೆ. ಎಲ್ಲಾ ಆಟಗಾರರ ಆಟವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಅವರು ನಮಗೆ ಕರ್ನಾಟಕ ತಂಡದಲ್ಲಿದ್ದಾಗಲೇ ಸಾಕಷ್ಟು ಸಹಾಯ ಮಾಡಿದ್ದರು. ಯಾವಾಗಲೂ ತಂಡದ ಬಗ್ಗೆಯೇ ಯೋಚಿಸುತ್ತಾರೆ. ಅವರಿಂದ ಸಾಕಷ್ಟು ಕಲಿಯುವ ಅವಕಾಶವಿದೆ’ ಎಂದು ಹೊಗಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ