ನ್ಯೂಜಿಲೆಂಡ್ ಸರಣಿಗೆ ಮುನ್ನ ಎಲ್ಲಾ ಆಟಗಾರರಿಗೆ ರಾಹುಲ್ ದ್ರಾವಿಡ್ ಬುಲಾವ್
ತಮ್ಮ ಮೊದಲ ಸರಣಿಗೆ ಮುನ್ನ ದ್ರಾವಿಡ್ ತಂಡದ ಎಲ್ಲಾ ಆಟಗಾರರ ಜೊತೆ ಪ್ರತ್ಯೇಕವಾಗಿ ಮಾತನಾಡಿ ಅವರಿಗೆ ಸ್ಥೈರ್ಯ ತುಂಬಲು ನಿರ್ಧರಿಸಿದ್ದಾರೆ. ಎಲ್ಲಾ ಆಟಗಾರರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ಕೆಲಸ ಮುಂದುವರಿಸಲು ದ್ರಾವಿಡ್ ನಿರ್ಧರಿಸಿದ್ದಾರಂತೆ.
ಅದರಲ್ಲೂ ಪ್ರತಿಯೊಬ್ಬ ಆಟಗಾರನ ಮನಸ್ಥಿತಿ ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ತಮ್ಮ ಕೆಲಸ ಮಾಡಲು ನಿರ್ಧರಿಸಿದ್ದಾರಂತೆ. ದ್ರಾವಿಡ್ ಆಗಮನ ತಂಡದಲ್ಲಿ ಹೊಸ ಬದಲಾವಣೆ ತರಬಹುದು ಎಂಬ ವಿಶ್ವಾಸ ಕ್ರಿಕೆಟ್ ಪ್ರಿಯರದ್ದು.