KL Rahul: ಶುಬ್ಮನ್ ಗಿಲ್ ರಿಂದಾಗಿ ಅತಂತ್ರರಾದ ಕೆಎಲ್ ರಾಹುಲ್: ಏನಾಗಿದೆ ನೋಡಿ

Krishnaveni K

ಶುಕ್ರವಾರ, 29 ನವೆಂಬರ್ 2024 (13:50 IST)
ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಓಪನರ್ ಆಗಿ ಭರ್ಜರಿ ಬ್ಯಾಟಿಂಗ್ ನಡೆಸಿದ ಕೆಎಲ್ ರಾಹುಲ್ ಗೆ ಈಗ ಶುಬ್ಮನ್ ಗಿಲ್ ರಿಂದಾಗಿ ಅತಂತ್ರ ಸ್ಥಿತಿ ಎದುರಾಗಿದೆ.

ಯಾವುದೇ ಆಟಗಾರನೇ ಆದರೂ ಒಂದು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮತ್ತೆ ಅವರಿಗೆ ಅವಕಾಶ ಸಿಕ್ಕೇ ಸಿಗುತ್ತದೆ. ಆದರೆ ಕೆಎಲ್ ರಾಹುಲ್ ದುರಾದೃಷ್ಟ ನೋಡಿ ಅವರಿಗೆ ತಂಡದಲ್ಲಿ ಅವಕಾಶ ಸಿಕ್ಕಿ ಉತ್ತಮ ಪ್ರದರ್ಶನ ನೀಡಿದರೂ ಮುಂದಿನ ಪಂದ್ಯಕ್ಕೆ ಅವಕಾಶ ಸಿಗುತ್ತದೋ ಎನ್ನುವುದು ಪಕ್ಕಾ ಇಲ್ಲ. ಸಿಕ್ಕರೂ ಅದೇ ಬ್ಯಾಟಿಂಗ್ ಆರ್ಡರ್ ಸಿಗುತ್ತದೆ ಎಂಬ ನಂಬಿಕೆಯಿಲ್ಲ. ಸಿಕ್ಕ ಕ್ರಮಾಂಕದಲ್ಲಿ ಆಡಬೇಕು.

ಹೀಗಾಗಿಯೇ ಕೆಎಲ್ ರಾಹುಲ್ ಟೀಂ ಇಂಡಿಯಾ ನಿಭಾಯಿಸದ ಪಾತ್ರಗಳಿಲ್ಲ. ಆರಂಭಿಕನಾಗಿ, ವಿಕೆಟ್ ಕೀಪರ್ ಆಗಿ, ಮೂರನೇ ಕ್ರಮಾಂಕದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕೆಳ ಕ್ರಮಾಂಕದಲ್ಲಿ ಹೀಗೇ ಕೋಚ್, ಟೀಂ ಮ್ಯಾನೇಜ್ ಮೆಂಟ್ ಏನು ಹೇಳುತ್ತದೋ ಆ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಯಬೇಕಾಗುತ್ತದೆ. ಇದು ಅವರ ಪ್ರದರ್ಶನದ ಮೇಲೂ ಪರಿಣಾಮ ಬೀರಿದ್ದಿದೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಗೈರಾಗಿದ್ದರಿಂದ ರಾಹುಲ್ ಆರಂಭಿಕರಾಗಿ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಗಿಲ್ ಗಾಯದಿಂದಾಗಿ ಗೈರಾಗಲಿದ್ದು ಅವರ ಸ್ಥಾನಕ್ಕೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದು ಎಂದು ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆದರೆ ಈಗ ಗಿಲ್ ಟೀಂ ಇಂಡಿಯಾ ಅಭ್ಯಾಸದ ವೇಳೆ ಭರ್ಜರಿ ಬ್ಯಾಟಿಂಗ್ ನಡೆಸಿದ್ದು, ಎರಡನೇ ಪಂದ್ಯದಲ್ಲಿ ಆಡುವುದು ಬಹುತೇಕ ಕನ್ ಫರ್ಮ್ ಆಗಿದೆ. ಇದರಿಂದಾಗಿ ಮತ್ತೆ ಕೆಎಲ್ ರಾಹುಲ್ ಗೆ ತಂಡದಲ್ಲಿ ಸ್ಥಾನದ ಬಗ್ಗೆ ಮತ್ತೆ ಅತಂತ್ರ ಸ್ಥಿತಿ ಎದುರಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ