ಕೆಎಲ್ ರಾಹುಲ್ ಚೇತರಿಕೆ: ಮುಂದಿನ ವಾರದಿಂದ ಎನ್ ಸಿಎಗೆ?
ಐಪಿಎಲ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಕಾಲಿಗೆ ಗಾಯ ಮಾಡಿಕೊಂಡಿದ್ದ ರಾಹುಲ್ ತೀವ್ರ ನೋವಿನಲ್ಲಿ ಒದ್ದಾಡಿದ್ದರು. ಬಳಿಕ ಅವರು ಶಸ್ತ್ರಚಿಕಿತ್ಸೆಗೊಳಗಾಗಿದ್ದರು.
ಇದೀಗ ಕೆಎಲ್ ರಾಹುಲ್ ವಾಕರ್ ಸಹಾಯವಿಲ್ಲದೇ ನಡೆದಾಡುವ ಮಟ್ಟಿಗೆ ಚೇತರಿಸಿಕೊಂಡಿದ್ದು, ಮುಂದಿನ ವಾರದಿಂದ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ನಿರೀಕ್ಷೆಯಿದೆ.