ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕನಾಗಲು ರೆಡಿ: ಕೆಎಲ್ ರಾಹುಲ್

ಮಂಗಳವಾರ, 18 ಜನವರಿ 2022 (16:51 IST)
ಪಾರ್ಲ್: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಮುಂದಿನ ನಾಯಕ ಯಾರು ಎಂಬ ಚರ್ಚೆ ಜಾರಿಯಲ್ಲಿರುವಾಗಲೇ ಕೆಎಲ್ ರಾಹುಲ್ ತಾವೂ ರೇಸ್ ನಲ್ಲಿರುವುದಾಗಿ ಹೇಳಿದ್ದಾರೆ.

ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸುತ್ತಿರುವ ಕೆಎಲ್ ರಾಹುಲ್ ಗೆ ಮಾಧ‍್ಯಮ ಪ್ರತಿನಿಧಿಗಳು ಟೆಸ್ಟ್ ತಂಡದ ನಾಯಕತ್ವಕ್ಕೆ ನಿಮ್ಮ ಹೆಸರು ಕೇಳಿಬರುತ್ತಿದೆಯಲ್ಲಾ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿರುವ ರಾಹುಲ್ ‘ನಾನು ಇದುವರೆಗೆ ಇದರ ಬಗ್ಗೆ ಯೋಚಿಸಿಯೇ ಇಲ್ಲ. ಒಂದು ವೇಳೆ ಟೆಸ್ಟ್ ತಂಡಕ್ಕೆ ನನ್ನನ್ನು ನಾಯಕನಾಗಿ ಆಯ್ಕೆ ಮಾಡಿದರೆ ಅದು ದೊಡ್ಡ ಗೌರವ ಎಂದುಕೊಳ್ಳುತ್ತೇನೆ’ ಎಂದಿದ್ದಾರೆ. ನಿನ್ನೆ ವೇಗಿ ಜಸ್ಪ್ರೀತ್ ಬುಮ್ರಾ ಕೂಡಾ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕತ್ವ ವಹಿಸಲು ಸಿದ್ಧ ಎಂದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ