ಐಪಿಎಲ್ ನಲ್ಲಿ ಕೆಎಲ್ ರಾಹುಲ್ ತ್ರಿವಿಕ್ರಮ

ಮಂಗಳವಾರ, 8 ಮೇ 2018 (07:50 IST)
ಮುಂಬೈ: ಪ್ರಸಕ್ತ ಐಪಿಎಲ್ ನಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ಕೆಎಲ್ ರಾಹುಲ್ ಅಭಿಮಾನಿಗಳ ಪ್ರೀತಿಗೆ ಪಾತ್ರಾಗಿರುವುದಷ್ಟೇ ಅಲ್ಲ, ಹೊಸದೊಂದು ದಾಖಲೆ ಬರೆದಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುತ್ತಿರುವ ರಾಹುಲ್, ಕ್ರಿಸ್ ಗೇಲ್ ಜತೆಗೆ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ. ಈ ಐಪಿಎಲ್ ಸೀಸನ್ ನಲ್ಲಿ ಕಿಂಗ್ಸ್ ಇಲೆವೆನ್ ಪರ ಒಟ್ಟು 10 ಬಾರಿ ಅರ್ಧಶತಕದ ಜತೆಯಾಟ ನಡೆದಿದೆ.

ಇದರಲ್ಲಿ 9 ಬಾರಿ ರಾಹುಲ್ ಭಾಗಿಯಾಗಿದ್ದಾರೆ ಎನ್ನುವುದು ವಿಶೇಷ. ಒಟ್ಟಾರೆಯಾಗಿ ನೋಡಿದರೆ ಇದೊಂದು ದೊಡ್ಡ ಸಾಧನೆ. ಒಂದೇ ಒಂದು ಬಾರಿ ಗೇಲ್ ಜತೆಗೆ ಕರುಣ್ ನಾಯರ್ ಅರ್ಧಶತಕದ ಜತೆಯಾಟವಾಡಿದ್ದಾರೆ. ಉಳಿದೆಲ್ಲಾ ಬಾರಿ ರಾಹುಲ್ ಜತೆಯಾಟವಾಡಿದ್ದು ನೋಡಿದರೆ ತಂಡಕ್ಕೆ ರಾಹುಲ್ ಕಾಂಟ್ರಿಬ್ಯೂಷನ್ ಎಷ್ಟಿದೆ ಎನ್ನುವುದು ಗೊತ್ತಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ