ಕರುಣ್ ನಾಯರ್ ಜೊತೆ ಕನ್ನಡ, ಸಾಯಿ ಜೊತೆ ತಮಿಳು ಇದು ಕೆಎಲ್ ರಾಹುಲ್ ಅಂದ್ರೆ
ಇಂಗ್ಲೆಂಡ್ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಕೆಎಲ್ ರಾಹುಲ್ ಎರಡೂ ಇನಿಂಗ್ಸ್ ನಲ್ಲಿ ಕ್ಲಾಸ್ ಆಟಗಾರನಂತೆ ಆಡಿದ್ದಾರೆ. ಅವರ ಹೊಡೆತಗಳು ಅಷ್ಟು ಅದ್ಭುತವಾಗಿತ್ತು. ಎರಡನೇ ಇನಿಂಗ್ಸ್ ನಲ್ಲಂತೂ ಶತಕ ದಾಖಲಿಸಿದರು.
ವಿಶೇಷವಾಗಿ ಎರಡನೇ ಇನಿಂಗ್ಸ್ ನಲ್ಲಿ ರಾಹುಲ್ ಸಾಯಿ ಸುದರ್ಶನ್, ರಿಷಭ್ ಪಂತ್ ಮತ್ತು ಕರುಣ್ ನಾಯರ್ ಜೊತೆ ಉಪಯುಕ್ತ ಜೊತೆಯಾಟವಾಡಿದರು. ಜೊತೆಗಾರನ ಜೊತೆ ಪಿಚ್ ಬಗ್ಗೆ ಆಟಗಾರರು ಪರಸ್ಪರ ಚರ್ಚಿಸುವುದು ಸಹಜ. ಅದೇ ರೀತಿ ಸಾಯಿ ಸುದರ್ಶನ್ ಜೊತೆ ರಾಹುಲ್ ತಮಿಳಿನಲ್ಲಿ ಮಾತನಾಡುವ ವಿಡಿಯೋ ಮೊನ್ನೆ ವೈರಲ್ ಆಗಿತ್ತು. ನಿನ್ನೆ ರಿಷಭ್ ಜೊತೆ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಬಳಿಕ ತಮ್ಮ ಗೆಳೆಯ ಕನ್ನಡಿಗ ಕರುಣ್ ನಾಯರ್ ಜೊತೆ ಕನ್ನಡದಲ್ಲೇ ಮಾತನಾಡುತ್ತಿದ್ದರು.
ಅವರ ಈ ಬಹುಭಾಷೆಯ ಪ್ರತಿಭೆಯನ್ನು ಕಾಮೆಂಟೇಟರ್ ದಿನೇಶ್ ಕಾರ್ತಿಕ್ ಕೂಡಾ ಕೊಂಡಾಡಿದ್ದಾರೆ. ಕೆಎಲ್ ರಾಹುಲ್ ಕೇವಲ ಬ್ಯಾಟಿಂಗ್ ನಲ್ಲಿ ಮಾತ್ರವಲ್ಲ ವೈಯಕ್ತಿಕವಾಗಿಯೂ ವೈವಿಧ್ಯಮಯ ಆಟಗಾರ ಎಂದು ಹೊಗಳಿದ್ದಾರೆ.