ಪತ್ನಿ ಜೊತೆ ಕೆಎಲ್ ರಾಹುಲ್ ಟೆಂಪಲ್ ರನ್

ಭಾನುವಾರ, 26 ಫೆಬ್ರವರಿ 2023 (17:00 IST)
Photo Courtesy: Twitter
ಮುಂಬೈ: ಕಳಪೆ ಫಾರ್ಮ್ ನಿಂದಾಗಿ ಸತತ ಟೀಕೆಗೊಳಗಾಗಿರುವ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಪತ್ನಿ ಸಮೇತರಾಗಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಮೂರನೇ ಟೆಸ್ಟ್ ನಲ್ಲಿ ರಾಹುಲ್ ಗೆ ಸ್ಥಾನ ಸಿಗುವುದು ಅನುಮಾನ ಎಂಬ ವರದಿಗಳ ಬೆನ್ನಲ್ಲೇ ಅವರು ದೇವರ ಮೊರೆ ಹೋಗಿದ್ದಾರೆ. ಇತ್ತೀಚೆಗಷ್ಟೇ ಮದುವೆಯಾಗಿರುವ ರಾಹುಲ್ ಪತ್ನಿ ಅಥಿಯಾ ಶೆಟ್ಟಿ ಜೊತೆ ಉಜ್ಜೈನಿಯ ಮಹಾಕಾಳೇಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ.

ರಾಹುಲ್ ಸಾಂಪ್ರದಾಯಿಕವಾಗಿ ಪಂಚೆ ಮತ್ತು ಶಲ್ಯ ಹೊದ್ದುಕೊಂಡಿದ್ದರೆ ಅಥಿಯಾ ಕೂಡಾ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ