ಮೊದಲ ಏಕದಿನಕ್ಕೆ ಇವರೇ ಓಪನರ್ಸ್: ಕನ್ ಫರ್ಮ್ ಮಾಡಿದ ವಿರಾಟ್ ಕೊಹ್ಲಿ

ಮಂಗಳವಾರ, 23 ಮಾರ್ಚ್ 2021 (09:37 IST)
ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ ಏಕದಿನ ಸರಣಿ ಆರಂಭವಾಗುತ್ತಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕರು ಯಾರಾಗಿರುತ್ತಾರೆ ಎಂಬ ವಿಚಾರವನ್ನು ನಾಯಕ ವಿರಾಟ್ ಕೊಹ್ಲಿ ಅಧಿಕೃತ ಮಾಡಿದ್ದಾರೆ.


ಟಿ20 ಸರಣಿಯಲ್ಲಿ ಪದೇ ಪದೇ ಆರಂಭಿಕರನ್ನು ಬದಲಾಯಿಸಲಾಗುತ್ತಿತ್ತು. ಆದರೆ ಏಕದಿನ ಸರಣಿಯಲ್ಲೂ ಈ ಪ್ರಯೋಗ ನಡೆಯಲಿದೆಯೇ ಎಂಬ ಪ್ರಶ್ನೆಗೆ ಅವರು ಸ್ಪಷ್ಟ ಉತ್ತರ ನೀಡಿದ್ದಾರೆ.

‘ಶಿಖರ್ ಮತ್ತು ರೋಹಿತ್ ಆರಂಭ ಮಾಡಲಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಓಪನರ್ಸ್ ಯಾರು ಎಂಬ ಬಗ್ಗೆ ಅನುಮಾನಗಳಿಗೆ ಜಾಗವೇ ಇಲ್ಲ. ಇವರೇ ನಮ್ಮ ಖಾಯಂ ಓಪನರ್ ಗಳು’ ಎಂದು ಕೊಹ್ಲಿ ಖಚಿತಪಡಿಸಿದ್ದಾರೆ. ರಿಷಬ್ ಪಂತ್ ವಿಕೆಟ್ ಕೀಪರ್ ಆಗಿ ಮುಂದುವರಿಯಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ