ಡಿಆರ್`ಎಸ್ ಚೀಟಿಂಗ್`ಗೆ ಯತ್ನಿಸಿದ ಸ್ಮಿತ್ ವಿರುದ್ಧ ಮುಗಿಬಿದ್ದ ವಿರಾಟ್ ಕೊಹ್ಲಿ..!

ಮಂಗಳವಾರ, 7 ಮಾರ್ಚ್ 2017 (16:25 IST)
ಅಂತೂ ಇಂತೂ ಭಾರತ ತಂಡ ಬೆಂಗಳೂರು ಟೆಸ್ಟ್`ನಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿದೆ. ಟೀಮ್ ಇಂಡಿಯಾ ಗೆಲ್ಲಲೇಬೇಕಿದ್ದ  ಪಂದ್ಯ ಕೆಲವು ರೋಚಕ ಕ್ಷಣಗಳಿಗೂ ಸಾಕ್ಷಿಯಾಗಿದೆ. ಅದರಲ್ಲಿ ಅತ್ಯಂತ ಗಮನ ಸೆಳೆದಿದ್ದು, 4ನೇ ದಿನದಾಟದ ವೇಳೆ ಆಸೀಸ್ ಕ್ಯಾಪ್ಟನ್ ಸ್ಟೀವ್ ಸ್ಮಿತ್ ಅವರ ಡಿಆರ್`ಎಸ್ ವಿವಾದ.


ಸ್ಮಿತ್ ನಡವಳಿಕೆಗೆ ಕೆರಳಿದ ಕೊಹ್ಲಿ: ಕೇವಲ 188 ರನ್`ಗಳ ಗುರಿ ನೀಡಿ ಮೈದಾನಕ್ಕಿಳಿದ ಭಾರತ ತಂಡ ಅಕ್ಷರಶಃ ಆಸ್ಟ್ರೇಲಿಯಾ ಮೇಲೆ ಮುಗಿಬಿದ್ದಿತ್ತು. ಭಾರತದ ಬೌಲರ್`ಗಳು ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಕಾಂಗರೂಗಳನ್ನ ಕಂಗೆಡಿಸಿದ್ದರು.4 ವಿಕೆಟ್ ಕಳೆದುಕೊಂಡು ಆಸೀಸ್ ಪತನದ ಹಾದಿ ಹಿಡಿದಿದ್ದಾಗ ನಾಯಕ ಸ್ಮಿತ್ ಅವರನ್ನೂ ಉಮೆಶ್ ಯಾದವ್ ಎಲ್ ಬಿ ಬಲೆಗೆ ಕೆಡವಿದ್ದರು.

ಈ ಸಂದರ್ಭ ಸ್ಮಿತ್ ಪೆವಿಲಿಯನ್ ಕಡೆಗೆ ನೋಡಿ ಸಹ ಆಟಗಾರರಿಂದ ಡಿಆರ್`ಎಸ್ ಸಲಹೆ ಕೇಳಿದರು. ನಿಯಮಗಳ ಪ್ರಕಾರ, ಒಬ್ಬ ಬ್ಯಾಟ್ಸ್`ಮನ್ ಫೀಲ್ಡಿನಲ್ಲಿರುವ ಸಹ ಆಟಗಾರನನ್ನ ಬಿಟ್ಟು ಬೇರೆ ಯಾವ ನೆರವು ಪಡೆಯುವಂತಿಲ್ಲ. ಆದರೆ, ಸ್ಮಿತ್ ಮಾಡುತ್ತಿದ್ದ ಚೀಟಿಂಗ್ ಗಮನಿಸಿದ ವಿರಾಟ್ ಕೊಹ್ಲಿ ಕೆಂಡಾಮಂಡಲವಾದರು ಅಂಪೈರ್ ಬಳಿಗೆ ತೆರಳಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು. ಅಂಪೈರ್ ಸಹ ಸ್ಮಿತ್ ಕಿವಿ ಹಿಂಡಿದರು.

>> ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.. 


ವೆಬ್ದುನಿಯಾವನ್ನು ಓದಿ