ವಿವಿಯನ್ ರಿಚರ್ಡ್ಸ್ ಅವರನ್ನು ನೆನಪಿಸುವ ವಿರಾಟ್ ಕೊಹ್ಲಿ : ರವಿಶಾಸ್ತ್ರಿ ಶ್ಲಾಘನೆ

ಗುರುವಾರ, 4 ಫೆಬ್ರವರಿ 2016 (17:34 IST)
ವಿರಾಟ್ ಕೊಹ್ಲಿ ಅವರ ಅತೀ ವೇಗದ ಸಾಧನೆಯನ್ನು ಕುರಿತು ಟೀಂ ಇಂಡಿಯಾ ನಿರ್ದೇಶಕ ರವಿಶಾಸ್ತ್ರಿ ಪುಳುಕಿತರಾಗಿದ್ದು,  ವೆಸ್ಟ್ ಇಂಡಿಯಾದ ಗ್ರೇಟ್ ವಿವಿಯನ್ ರಿಚರ್ಡ್ಸ್ ಅವರ ಪ್ರತಿರೂಪ ಕೊಹ್ಲಿ ಎಂದು ಹೇಳಿದ್ದಾರೆ. ವಿವಿಯನ್ ಎಲ್ಲಾ ಸ್ವರೂಪದ ಆಟದಲ್ಲಿ ಮೇಲುಗೈ ಸಾಧಿಸಿದ ಹಾಗೆ ಕೊಹ್ಲಿ  ಅವರ ಬ್ಯಾಟಿಂಗ್ ನನಗೆ ವಿವಿಯನ್ ನೆನಪಿಸುತ್ತದೆ  ಎಂದು ಶಾಸ್ತ್ರಿ  ಮುಂದಿನ ತಿಂಗಳು ವಿಶ್ವ ಟಿ 20ಗೆ ಮುಂಚಿತವಾಗಿ ಪ್ರಸಕ್ತ ಭಾರತೀಯ ತಂಡವನ್ನು ವಿಶ್ಲೇಷಿಸಿದರು. ಕತ್ತಿಕಾಳಗದ ಪಟು ತನ್ನ ಕತ್ತಿಯನ್ನು ಝುಳುಪಿಸುವ ರೀತಿಯಲ್ಲಿ ಅವರು ಬ್ಯಾಟ್ ಬೀಸುತ್ತಾರೆ ಎಂದು ಶಾಸ್ತ್ರಿ ಬಣ್ಣಿಸಿದರು. 
 
ಈ ಹೋಲಿಕೆಯನ್ನು ತೆಗೆದುಹಾಕುವಂತಿಲ್ಲ. ಏಕೆಂದರೆ ಸ್ವತಃ ರಿಚರ್ಡ್ಸ್ ಅವರೇ ಭಾರತೀಯ ಆಟಗಾರನ ಆಟವು ತಾವು ಆಡಿದ ಕ್ರಿಕೆಟ್ ನೆನಪಿಸುತ್ತದೆ ಎಂದು ಮೆಚ್ಚುಗೆಯ ಮಾತು ಹೇಳಿದ್ದರು. 
 
ಬಲಗೈ ಆಟಗಾರ ಎಲ್ಲಾ ಮೂರು ಟಿ 20 ಪಂದ್ಯಗಳಲ್ಲಿ ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಮುಂಚಿನ ಏಕದಿನಗಳಲ್ಲಿ ಎರಡು ಶತಕಗಳನ್ನು ಅವರು ಬಾರಿಸಿದ್ದರು. ಕೊಹ್ಲಿ, ಅವರಿಗೆ ಸರಿಸಮಾನ ಕೌಶಲ್ಯದ ರೋಹಿತ್ ಶರ್ಮಾ ಮತ್ತು ಪುನಶ್ಚೇತನಗೊಂಡ ಶಿಖರ್ ಧವನ್ ಜತೆ ಅತ್ಯುತ್ತಮ ಅಗ್ರ ಮೂವರು ಕ್ರಿಕೆಟಿಗರೆನಿಸಿದ್ದಾರೆ ಎಂದು ಶಾಸ್ತ್ರಿ ಭಾವಿಸಿದ್ದಾರೆ. ಅಗ್ರ ಮೂವರಿಂದಲೇ ಆಸ್ಟ್ರೇಲಿಯಾ ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಅನುಭವಿಸಿದ ಪತನ ಕಂಡಿತು ಎಂದು ಶಾಸ್ತ್ರಿ ಹೇಳಿದರು. 
 

ವೆಬ್ದುನಿಯಾವನ್ನು ಓದಿ