ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ದಾಖಲಿಸಿದ ಏಕೈಕ ಟೀಂ ಇಂಡಿಯಾ ನಾಯಕ ವಿರಾಟ್

ಭಾನುವಾರ, 9 ಅಕ್ಟೋಬರ್ 2016 (14:49 IST)
ಭಾರತ-ನ್ಯೂಜಿಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ತಂಡದ ನಾಯಕ ವಿರಾಟ್ ಕೊಹ್ಲಿ ಭರ್ಜರಿ ದ್ವಿಶತಕ ಬಾರಿಸಿದ್ದಾರೆ. 
 
ಟೆಸ್ಟ್ ಪಂದ್ಯವೊಂದರಲ್ಲಿ ದ್ವಿಶತಕ ದಾಖಲಿಸಿದ ಏಕೈಕ ಟೀಂ ಇಂಡಿಯಾ ತಂಡದ ನಾಯಕ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.
 
ಅಜಿಂಕ್ಯ ರೆಹಾನೆಯೊಂದಿಗೆ ನ್ಯೂಜಿಲೆಂಡ್ ಬೌಲರ್‌ಗಳನ್ನು ಮನಬಂದಂತೆ ಚಚ್ಚಿದ ಕೊಹ್ಲಿ, ಟೀಂ ಇಂಡಿಯಾ ತಂಡ ಕ್ಲೀನ್ ಸ್ವೀಪ್ ಕನಸಲ್ಲಿದೆ.
 
ನ್ಯೂಜಿಲೆಂಡ್- ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 400 ರನ್‌ಗಳ ಗಡಿಯನ್ನು ದಾಟಿದೆ. ಅಜಿಂಕ್ಯ ರೆಹಾನೆ 159 ರನ್‌ಗಳಿಸಿದ್ದಾರೆ, ಕೊಹ್ಲಿ ಮತ್ತು ರೆಹಾನೆ ಜೋಡಿ 300 ರನ್‌ಗಳ ಜೊತೆಯಾಟದಲ್ಲಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ