ಟೀಂ ಇಂಡಿಯಾ ಗೆಲ್ಲಿಸಿದ ಸೂರ್ಯಕುಮಾರ್, ವಿರಾಟ್ ಕೊಹ್ಲಿ
ಭಾರತಕ್ಕೆ ಆರಂಭದಲ್ಲೇ ಕೆಎಲ್ ರಾಹುಲ್-ರೋಹಿತ್ ಶರ್ಮಾ ಆಘಾತ ನೀಡಿದರು. ರಾಹುಲ್ ಕೇವಲ 1 ರನ್ ಗೆ ವಿಕೆಟ್ ಒಪ್ಪಿಸಿದರೆ ರೋಹಿತ್ 17 ರನ್ ಗಳಿಸಿದರು. ಆದರೆ ನಂತರ ಜೊತೆಯಾದ ಸೂರ್ಯಕುಮಾರ್-ಕೊಹ್ಲಿ ಜೋಡಿ ಶತಕದ ಜೊತೆಯಾಟವಾಡಿ ಭಾರತವನ್ನು ಗೆಲುವಿನತ್ತ ಕೊಂಡೊಯ್ದಿತು. ಸೂರ್ಯ ಕೇವಲ 36 ಎಸೆತಗಳಿಂದ 69 ರನ್ ಗಳಿಸಿದರೆ ಕೊಹ್ಲಿ 48 ಎಸೆತಗಳಿಂದ 63 ರನ್ ಗಳಿಸಿ ಕೊನೆಯ ಓವರ್ ನಲ್ಲಿ ಔಟಾದರು. ಹಾರ್ದಿಕ್ ಪಾಂಡ್ಯ 16 ಎಸೆತಗಳಿಂದ 25 ರನ್ ಗಳಿಸಿ ಗೆಲುವಿನ ಔಪಚಾರಿಕತೆ ಪೂರೈಸಿದರು. ಸೂರ್ಯಕುಮಾರ್ ಯಾದವ್ ಪಂದ್ಯ ಶ್ರೇಷ್ಠರಾದರೆ, ಸರಣಿಯುದ್ದಕ್ಕೂ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದ ಅಕ್ಸರ್ ಪಟೇಲ್ ಸರಣಿ ಶ್ರೇಷ್ಠರಾದರು.