ಸುರೇಶ್ ರೈನಾ ಬಳಿಕ 5000 ಟಿ20 ರನ್ ಪೂರೈಸಿದ ರೋಹಿತ್ ಶರ್ಮಾ

ಶುಕ್ರವಾರ, 15 ಮೇ 2015 (15:04 IST)
ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಗುರುವಾರ ಟ್ವೆಂಟಿ20  ಕ್ರಿಕೆಟ್‌ನಲ್ಲಿ ಸುರೇಶ್ ರೈನಾ ಬಳಿಕ 5,000 ರನ್ ಪೂರೈಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿದ್ದಾರೆ.  ರೋಹಿತ್ 21 ಎಸೆತಗಳಲ್ಲಿ 30 ರನ್ ಸ್ಕೋರ್ ಮಾಡುವ ಮೂಲಕ ಹಾಲಿ ಚಾಂಪಿಯನ್ಸ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮುಂಬೈ ರೋಚಕ 5 ರನ್‌ಗಳಿಂದ ಸೋಲಿಸಿತು. 
 
 ಐದು ಬೌಂಡರಿಗಳ ಅವರ ಆಟದಲ್ಲಿ ರೋಹಿತ್ ಟಿ20 ರನ್ ಟ್ಯಾಲಿಯನ್ನು 5019ಕ್ಕೆ ಒಯ್ದರು. 199 ಪಂದ್ಯಗಳಲ್ಲಿ 32.59 ಸರಾಸರಿಯೊಂದಿಗೆ ಈ ಮೈಲಿಗಲ್ಲನ್ನು ಸಾಧಿಸಿದ 10ನೇ ಆಟಗಾರರಾದರು.  ಕ್ರಿಸ್ ಗೇಲ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, 7362 ರನ್ ಗಳಿಸಿದ್ದಾರೆ.  ರೋಹಿತ್ ಏಕದಿನ ಪಂದ್ಯದಲ್ಲಿ ಅತ್ಯಧಿಕ ವೈಯಕ್ತಿಕ ಮೊತ್ತದ ದಾಖಲೆ ಹೊಂದಿದ್ದಾರೆ. 
 
ಸಾಮಾನ್ಯವಾಗಿ ಇದು 180 ರನ್ ಗಳಿಸುವ ವಿಕೆಟ್ ಆಗಿದ್ದು, ಆದರೆ ಈ ವಿಕೆಟ್ ಸ್ವಲ್ಪ ನಿಧಾನವಾಗಿದ್ದು, ಇದೊಂದು ಮೈನವಿರೇಳಿಸುವ ಪಂದ್ಯ ಎಂದು ರೋಹಿತ್ ಉದ್ಗರಿಸಿದ್ದಾರೆ. 
 
 ಕೊನೆಯ ಓವರಿನವರೆಗೆ ಇದು ಕುತೂಹಲ ಕೆರಳಿಸಿ ಪ್ರೇಕ್ಷಕರಿಗೆ ಅದ್ಭುತ ಆಟವಾಗಿ ಪರಿಣಮಿಸಿತು ಎಂದು ರೋಹಿತ್ ಹೇಳಿದರು.  ರೋಹಿತ್ 33.83 ಸರಾಸರಿಯಲ್ಲಿ 13 ಇನ್ನಿಂಗ್ಸ್‌ಗಳಲ್ಲಿ 406 ರನ್ ಸ್ಕೋರ್ ಮಾಡಿ 400 ರನ್ ಸ್ಕೋರ್ ಮಾಡಿದ ಮೊದಲ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಐಪಿಎಲ್ ಸೀಸನ್‌ನಲ್ಲಿ ಐದನೇ ಬಾರಿಗೆ 400ಕ್ಕಿಂತ ಹೆಚ್ಚು ರನ್ ಗಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. 
 

ವೆಬ್ದುನಿಯಾವನ್ನು ಓದಿ