ವಿರಾಟ್ ಕೊಹ್ಲಿಯಿಲ್ಲದ ಕೊರತೆ ನೀಗಿಸಿದ ಕುಲದೀಪ್ ಯಾದವ್

ಶನಿವಾರ, 25 ಮಾರ್ಚ್ 2017 (16:45 IST)
ಧರ್ಮಶಾಲಾ: ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ನಾಯಕನಿಲ್ಲದ ಟೀಂ ಇಂಡಿಯಾ ಹೇಗೆ ಆಡುತ್ತದೋ ಎಂಬ ಆತಂಕವನ್ನು ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ಕುಲದೀಪ್ ಯಾದವ್ ನೀಗಿಸಿದರು.

 

ಕುಲದೀಪ್ ಸ್ಪಿನ್ ಜಾದೂಗೆ ಸಿಲುಕಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ ನಲ್ಲಿ 300 ರನ್ ಗಳಿಗೆ ಆಲೌಟ್ ಆಯಿತು. ಯಾದವ್ ಪ್ರಮುಖ ನಾಲ್ಕು ವಿಕೆಟ್ ಕಿತ್ತರು. ದಿನದಂತ್ಯಕ್ಕೆ ಕೇವಲ ಒಂದು ಓವರ್ ಆಡಿದ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೇ ರನ್ ಗಳಿಸದೇ ಪೆವಿಲಿಯನ್ ಗೆ ಮರಳಿತು.

 
ಸತತ 54 ಟೆಸ್ಟ್ ಆಡಿದ್ದ ಕೊಹ್ಲಿ ಈ ಪಂದ್ಯದಲ್ಲಿ ಮೊದಲ ಬಾರಿಗೆ ಹೊರಗುಳಿಯುವಂತಾದರು. ಆದರೆ ಈ ಪಂದ್ಯದಲ್ಲಿ ಕಳೆದ ಪಂದ್ಯಗಳಷ್ಟು ಭಾರತ ಪರದಾಡಲಿಲ್ಲ. ಕುಲದೀಪ್ ಜತೆಗೆ ಉಮೇಶ್ ಯಾದವ್ 2 ವಿಕೆಟ್ ಕಿತ್ತರು. ಅಶ್ವಿನ್ ಮತ್ತು ಜಡೇಜಾ, ಭುವನೇಶ್ವರ್ ಕುಮಾರ್ ತಲಾ ಒಂದೊಂದು ವಿಕೆಟ್ ಕಿತ್ತರು.

 
ವಿಶೇಷವೆಂದರೆ ಇಂದು ಚೊಚ್ಚಲ ಪಂದ್ಯವಾಡುತ್ತಿರುವವರ ದಿನವಾಗಿತ್ತು. ಕುಲದೀಪ್ ಉತ್ತಮ ಬೌಲಿಂಗ್ ಸಂಘಟಿಸಿದರೆ, ಇನ್ನೊಬ್ಬ ಚೊಚ್ಚಲ ಪಂದ್ಯವಾಡುತ್ತಿರುವ ಶ್ರೇಯಸ್ ಐಯರ್ ತಳವೂರಿ ಆಡುತ್ತಿದ್ದ ಮ್ಯಾಥ್ಯೂ ವೇಡ್ ರನ್ನು ರನೌಟ್ ಮಾಡಿದರು.

 
ಇಂದಿನ ದಿನವಿಡೀ ಉಭಯ ತಂಡಗಳು ಯಾವುದೇ ರಿವ್ಯೂ ಬಳಸಲಿಲ್ಲ. ಅಂತೆಯೇ ಯಾವುದೇ ಆಟಗಾರನೂ ಸ್ಲೆಡ್ಜಿಂಗ್ ಮಾಡುವ ಗೋಜಿಗೆ ಹೋಗಲಿಲ್ಲ. ಒಂಥರಾ ಕೂಲ್ ಆಟ ಇಂದಿನದಾಗಿತ್ತು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ