ಕುಸಾಲ್ ಮೆಂಡಿಸ್ 53 ರನ್, ಶ್ರೀಲಂಕಾ 2 ವಿಕೆಟ್‌ಗೆ 109

ಗುರುವಾರ, 4 ಆಗಸ್ಟ್ 2016 (12:35 IST)
ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವೆ ಮೊದಲ ಟೆಸ್ಟ್‌ನಲ್ಲಿ ಕುಸಾಲ್ ಮೆಂಡಿಸ್ ಅವರ 176 ರನ್ ದಿಟ್ಟ ಶತಕದಿಂದ ಗೆಲುವಿನ ನಗೆ ಚಿಮ್ಮಿದ ಶ್ರೀಲಂಕಾಕ್ಕೆ ಎರಡನೇ ಟೆಸ್ಟ್‌ನಲ್ಲಿ ಕೂಡ ಕುಸಾಲ್ ಮೆಂಡಿಸ್ ಆಸರೆಯಾಗಿದ್ದು, 83 ಎಸೆತಗಳಲ್ಲಿ 52 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಕುಸಾಲ್ ಪೆರೀರಾ 74 ಎಸೆತಗಳಲ್ಲಿ 47 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

ಶ್ರೀಲಂಕಾ ಆರಂಭದಲ್ಲೇ ಸ್ಟಾರ್ಕ್ ಬೌಲಿಂಗ್ ದಾಳಿಗೆ ನಲುಗಿ ಕರುಣಾರತ್ನೆ ಮತ್ತು ಕೌಶಲ್ ಡಿಸಿಲ್ವ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ ಕುಸಾಲ್ ಮೆಂಡಿಸ್ ಮತ್ತೆ ಬ್ಯಾಟಿಂಗ್ ಕೌಶಲ ಪ್ರದರ್ಶಿಸಿ ಶ್ರೀಲಂಕಾವನ್ನು ಪತನದಿಂದ ಪಾರು ಮಾಡಿದರು. ಕುಸಾಲ್ ಮೆಂಡಿಸ್ ಮತ್ತು ಕುಸಾಲ್ ಪೆರೀರಾ ಇಬ್ಬರೂ 100 ರನ್ ಜತೆಯಾಟವಾಡಿದ್ದಾರೆ. ಕುಸಾಲ್ ಮೆಂಡಿಸ್ ಸ್ಕೋರಿನಲ್ಲಿ 6 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳಿವೆ.
 
 ಶ್ರೀಲಂಕಾ ಮೊದಲ ಇನ್ನಿಂಗ್ಸ್ 109ಕ್ಕೆ 2 ವಿಕೆಟ್
ಕುಸಾಲ್ ಪೆರೇರಾ 47, ಕುಸಾಲ್ ಮೆಂಡಿಸ್ 52 ರನ್
ವಿಕೆಟ್ ಪತನ 0-1(ಡಿಮುತ್ ಕರುಣಾರತ್ನೆ 0.1) 9-2(ಕೌಶಲ್ ಸಿಲ್ವಾ 4.4)
ಬೌಲಿಂಗ್ ವಿವರ
ಮಿಚೆಲ್ ಸ್ಟಾರ್ಕ್ 2 ವಿಕೆಟ್ 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ