ವಿಶ್ವಕಪ್ 2019: ಮಾಲಿಂಗನ ಆಟಕ್ಕೆ ಸೋತ ಇಂಗ್ಲೆಂಡ್

ಶನಿವಾರ, 22 ಜೂನ್ 2019 (10:04 IST)
ಲಂಡನ್: ಈ ಬಾರಿ ವಿಶ್ವಕಪ್ ಕೂಟದಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿರುವ ಇಂಗ್ಲೆಂಡ್ ಗೆ ನಿನ್ನೆ ಎರಡನೆಯ ಬಾರಿಗೆ ಆಘಾತದ ಸೋಲು ಸಿಕ್ಕಿದೆ.


ಇದುವರೆಗೆ ದುರ್ಬಲವೆನಿಸಿಕೊಂಡಿದ್ದ ಶ್ರೀಲಂಕಾ  ನಿನ್ನೆಯ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ವೈಫಲ್ಯ ಕಂಡರೂ ಬೌಲಿಂಗ್ ನಲ್ಲಿ ಮಿಂಚಿ ಅತಿಥೇಯರಿಗೆ 20 ರನ್ ಗಳ ಆಘಾತಕಾರಿ ಸೋಲುಣಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ನಾಯಕ ಏಂಜಲೋ ಮ್ಯಾಥ್ಯೂಸ್ ಬಾರಿಸಿದ 85 ರನ್ ಗಳ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೊತ್ತ ನೋಡಿ ಇಂಗ್ಲೆಂಡ್ ಸುಲಭವಾಗಿ ಗೆಲ್ಲಬಹುದೇ ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು.

ಅದಕ್ಕೆ ತಕ್ಕಂತೆ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಗೆ ಪ್ರಮುಖ ಬ್ಯಾಟ್ಸ್ ಮನ್ ಗಳಾದ ಜೋ ರೂಟ್ (57) ಮತ್ತು ಬೆನ್ ಸ್ಟೋಕ್ಸ್ (ಅಜೇಯ 82) ಆಸರೆಯೂ ಇತ್ತು. ಆದರೆ ಇದರ ನಡುವೆ ಮಾಲಿಂಗ ದಾಳಿಗೆ ಕುಸಿತದ ಹಾದಿ ಹಿಡಿದ ಇಂಗ್ಲೆಂಡ್ 47 ಓವರ್ ಗಳಲ್ಲಿ 212 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಮಾಲಿಂಗ 4 ವಿಕೆಟ್ ಕಬಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ