ಪುರುಷರ ಕ್ರಿಕೆಟ್ ಬಿಟ್ಟಾಕ್ರೀ.. ಸ್ವಲ್ಪ ಲೇಡೀಸ್ ಕಡೆ ನೋಡಿ!

ಶನಿವಾರ, 24 ಜೂನ್ 2017 (11:05 IST)
ಲಂಡನ್: ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಭಾರತದ ವಿರುದ್ಧ ಸೋತು ಭಾರತೀಯರಿಗೆಲ್ಲಾ ನಿರಾಸೆ ಉಂಟುಮಾಡಿದ ಪುರುಷರ ಕ್ರಿಕೆಟ್ ನ ರಗಳೆಯೇ ಬೇಡ. ಸ್ವಲ್ಪ ದಿನ ಮಹಿಳಾ ಕ್ರಿಕೆಟಿಗರ ಹಬ್ಬ ನೋಡಿ ಪ್ರೋತ್ಸಾಹ ನೀಡಿ.

 
ಇಂದಿನಿಂದ ಇಂಗ್ಲೆಂಡ್ ನಲ್ಲಿ ಮಹಿಳಾ ವಿಶ್ವಕಪ್ ಪಂದ್ಯಾವಳಿ ಆರಂಭವಾಗುತ್ತಿದ್ದು, ಆರಂಭಿಕ ಪಂದ್ಯದಲ್ಲೇ ಅತಿಥೇಯರ ಜತೆ ಟೀಂ ಇಂಡಿಯಾ ಸೆಣಸಲಿದೆ. ಈ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ನಲ್ಲಿ ಮಧ್ಯಾಹ್ನ 3 ಗಂಟೆಯಿಂದ ಆರಂಭವಾಗಲಿದೆ.

ಪ್ರತಿಭಾವಂತರನ್ನೇ ಹೊಂದಿರುವ ಟೀಂ ಇಂಡಿಯಾಗೆ ಖ್ಯಾತ ಬ್ಯಾಟಿಂಗ್ ತಾರೆ ಮಿಥಾಲಿ ರಾಜ್ ಸಾರಥ್ಯವಿದೆ. ದೀಪ್ತಿ ಶರ್ಮಾ ಭರವಸೆಯ ಬ್ಯಾಟ್ಸ್ ಮನ್. ಜೂಲಾನ್ ಗೋಸ್ವಾಮಿ ವಿಶ್ವದ ಬೌಲರ್ ಗಳ ಪೈಕಿಯೇ ಅತ್ಯಧಿಕ ವಿಕೆಟ್ ಪಡೆದ ದಾಖಲೆಯ ಆಟಗಾರ್ತಿ. ಇಂಗ್ಲೆಂಡ್ ತಂಡ ಭಾರತಕ್ಕೆ ಹೋಲಿಸಿದರೆ ಬಲಿಷ್ಠ. ಹಾಗಿದ್ದರೂ ಹೇಗಾದರೂ ಸರಿಯೇ, ಪುರುಷರಿಗಿಂತ ನಾವೇನೂ ಕಮ್ಮಿಯಲ್ಲ ಎಂದು ತೋರಿಸುವ ಛಲ ಮಹಿಳೆಯರಲ್ಲಿದೆ.

ಪಂದ್ಯಕ್ಕೂ ಮೊದಲೇ ಸುದ್ದಿಗೋಷ್ಠಿಯಲ್ಲೂ ಪುರುಷರಿಗೆ ಸಿಗುವ ಬೆಲೆ ನಮಗಿಲ್ಲ. ನಾವು ಗೆದ್ದರೂ ಸುದ್ದಿಯಾಗಲ್ಲ ಎಂದು ಮಿಥಾಲಿ ಬೇಸರದಿಂದಲೇ ಹೇಳಿಕೊಂಡಿದ್ದರು. ಸದಾ ಮಹಿಳೆಯರಿಗೆ ಸಮಾನತೆ ಬಗ್ಗೆ ಮಾತನಾಡುವ ನಾವು ಮಹಿಳೆಯರು ಪಂದ್ಯವಾಡುವಾಗ ಪುರುಷರ ಕ್ರಿಕೆಟಿಗರ ನೀಡಿದಷ್ಟೇ ಪ್ರಾಮುಖ್ಯತೆ ನೀಡಿ ಪ್ರೋತ್ಸಾಹಿಸೋಣ. ಏನಂತೀರಿ?!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌiನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ