ಭಾರತ ಆಡುವ ಪಂದ್ಯಗಳು ಭಾನುವಾರವೇ ಇರುತ್ತವೆ ಯಾಕೆ ಗೊತ್ತಾ?

ಕೃಷ್ಣವೇಣಿ. ಕೆ

ಶುಕ್ರವಾರ, 16 ಜೂನ್ 2017 (09:23 IST)
ಬೆಂಗಳೂರು: ಇತ್ತೀಚೆಗೆ ಯಾವುದೇ ಐಸಿಸಿ ಟೂರ್ನಿಗಳಿರಲಿ, ಭಾರತ ಆಡುವ ಪಂದ್ಯಗಳು ಹೆಚ್ಚಾಗಿ ಭಾನುವಾರವೇ ಬರುವಂತೆ ವೇಳಾಪಟ್ಟಿ ಸಿದ್ಧವಾಗುತ್ತದೆ. ಇದರ ಹಿಂದೆ ಕ್ರಿಕೆಟ್ ದೊರೆಗಳ ದೊಡ್ಡ ಲಾಭದ ಲೆಕ್ಕಾಚಾರವೇ ಇದೆ.

 
ಉದಾಹರಣೆಗೆ ಇದೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದ ಮೊದಲ ಸೆಮಿಫೈನಲ್ ಪಂದ್ಯವನ್ನೇ ತೆಗೆದುಕೊಳ್ಳೋಣ. ಟೂರ್ನಿ ನಡೆಯುತ್ತಿರುವುದು ಇಂಗ್ಲೆಂಡ್ ನಲ್ಲಿ. ಆದರೂ ಅತಿಥೇಯ ತಂಡವನ್ನು ಹುರಿದುಂಬಿಸಲು ದೊಡ್ಡ ಅಭಿಮಾನಿಗಳೇನೂ ಕಾಣುತ್ತಿರಲಿಲ್ಲ. ಅದಕ್ಕಿಂತ ದೊಡ್ಡದಾಗಿ ಪಾಕ್ ಬಗ್ಗೆ ಜಯಕಾರ ಕೇಳಿಬರುತ್ತಿದೆ. ಅಸಲಿಗೆ ಅಲ್ಲಿ ಸೆಮಿಫೈನಲ್ ನಲ್ಲಿ ಕಳೆಯೇ ಇರಲಿಲ್ಲ!

ಏಷ್ಯನ್ ರಾಷ್ಟ್ರಗಳ ಹೊರತಾಗಿ ನಡೆಯುವ ಯಾವುದೇ ಕ್ರಿಕೆಟ್ ಪಂದ್ಯಗಳಿಗೆ ಇತ್ತೀಚೆಗೆ ವೀಕ್ಷಕರೇ ಇರುವುದಿಲ್ಲ. ಕ್ರಿಕೆಟ್ ಜನಕರ ನಾಡಿನಲ್ಲೇ ಇದೀಗ ಕ್ರಿಕೆಟ್ ನ್ನು ವೀಕ್ಷಿಸಲೆಂದು ಮೈದಾನಕ್ಕೆ ಬರುವವರ ಸಂಖ್ಯೆ ಕಡಿಮೆ ಎನ್ನುವುದು ವಿಪರ್ಯಾಸ.

ಅದೇ ಭಾರತ ಆಡುವ ಪಂದ್ಯಗಳು ವಿಶ್ವದ ಎಲ್ಲೇ ನಡೆದರೂ ಭಾರತದ ಅಭಿಮಾನಿಗಳ ದೊಡ್ಡ ಗುಂಪೇ ಅಲ್ಲಿರುತ್ತದೆ. ಇತ್ತೀಚೆಗೆ ಬಾಂಗ್ಲಾದೇಶ ತಂಡಕ್ಕೂ ಅಭಿಮಾನಿಗಳ ಬಳಗ ಹೆಚ್ಚುತ್ತಿದೆ. ನಿನ್ನೆದುರ್ಬಲ ಮತ್ತು ಬಲಿಷ್ಠ ತಂಡದೆದುರು ನಡೆದ ಪಂದ್ಯವಾದರೂ, ಎಡ್ಜ್ ಬಾಸ್ಟನ್ ಮೈದಾನದ ಇತಿಹಾಸದಲ್ಲೇ ದಾಖಲೆಯ ವೀಕ್ಷಕರು ಹಾಜರಿದ್ದರು. 24340 ಮಂದಿ ನಿನ್ನೆ ಪಂದ್ಯ ವೀಕ್ಷಿಸಿದ್ದು ದಾಖಲೆ!

ಪಾಕಿಸ್ತಾನ, ಶ್ರೀಲಂಕಾ ತಂಡವನ್ನು ಬೆಂಬಲಿಸುವವರು ಅತ್ಯುತ್ಸಾಹದಿಂದ ಮೈದಾನಕ್ಕೆ ಬರುತ್ತಾರೆ. ಆದರೆ ಅದೇ ಪಂದ್ಯ ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವೆ ನಡೆಯುತ್ತಿದ್ದರೆ ಪ್ರೇಕ್ಷಕರ ಕೊರತೆ ಕಾಣುತ್ತದೆ.

ಭಾರತ ಮತ್ತು ಪಾಕಿಸ್ತಾನ ಭಾನುವಾರ ಅಥವಾ ಇನ್ಯಾವುದೋ ರಜಾ ದಿನಗಳಲ್ಲಿ ನಡೆದರೆ ಮುಗಿದೇ ಹೋಯಿತು. ಇದೇ ಕಾರಣಕ್ಕೇ ಏನೋ ಕ್ರಿಕೆಟ್ ಆಯೋಜಕರೂ ಪ್ರಮುಖ ಟೂರ್ನಮೆಂಟ್ ಗಳಲ್ಲಿ ಒಂದಾದರೂ ಏಷ್ಯನ್ ತಂಡ ಫೈನಲ್ ಗೆ ಬಂದರೆ ಸಾಕು ಎಂದು ಆಗ್ರಹಿಸುತ್ತಿರುತ್ತಾರೆ. ಇಲ್ಲಿನ ಜನರ ಕ್ರಿಕೆಟ್ ಪ್ರೀತಿ ಯಾವತ್ತೂ ಕಡಿಮೆಯಾಗಿಲ್ಲ. ಹಾಗಾಗಿಯೇ ಕುರ್ಚಿಗಳೂ ಬಣ ಬಣ ಎನಿಸುವುದಿಲ್ಲ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ