ಏಕದಿನದಲ್ಲಿ 350 ರನ್ ಬಾರಿಸಿ ದಾಖಲೆ ನಿರ್ಮಿಸಿದ ಲಿವಿಂಗ್‌ಸ್ಟೋನ್

ಸೋಮವಾರ, 20 ಏಪ್ರಿಲ್ 2015 (19:23 IST)
ಲಂಕಾಶೈರ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಕ್ಲಬ್ ಕ್ರಿಕೆಟ್ ಪಂದ್ಯದಲ್ಲಿ 138 ಎಸೆತಗಳಲ್ಲಿ 350 ರನ್ ಬಾರಿಸಿ ದಾಖಲೆ ಬರೆದಿದ್ದಾರೆ.  ನಾನ್‌ವಿಚ್ ಪರ ಕಾಲ್ಡಿ ವಿರುದ್ಧ ಆಡಿದ ಕ್ಲಬ್ ಚಾಂಪಿಯನ್ ಷಿಪ್ ಪಂದ್ಯದಲ್ಲಿ   21ರ ಪ್ರಾಯದ ಲಿವಿಂಗ್ ಸ್ಟೋನ್ ತಮ್ಮ ಸ್ಕೋರಿನಲ್ಲಿ 34 ಬೌಂಡರಿ ಮತ್ತು 27 ಸಿಕ್ಸರ್‌ಗಳನ್ನು ಬಾರಿಸಿದರು.  ಅವರು ಇತಿಹಾಸದಲ್ಲೇ ಅತ್ಯಧಿಕ ಏಕದಿನ ರನ್ ಸ್ಕೋರರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
 
 100 ರನ್ ಸ್ಕೋರ್ ಮಾಡಿದ ಬಳಿಕ ಪ್ರತಿಯೊಂದು ಎಸೆತವನ್ನು ಸಿಕ್ಸರ್ ಹೊಡೆಯಲು ತಾವು ಪ್ರಯತ್ನಿಸಿದ್ದಾಗಿ  ಅವರು ಹೇಳಿದರು. ನ್ಯಾನ್ ವಿಚ್ ತಂಡವು 7 ವಿಕೆಟ್‌ಗೆ 579 ರನ್ ಗಳಿಸಿದ್ದರೆ ನಂತರ ಬ್ಯಾಟಿಂಗ್ ಆಡಿದ ಕ್ಯಾಲ್ಡಿ ಕೇವಲ 79 ರನ್‌ಗೆ ಆಲೌಟ್ ಆಗಿದ್ದರಿಂದ 500 ರನ್ ಜಯಗಳಿಸಿದೆ. 

ವೆಬ್ದುನಿಯಾವನ್ನು ಓದಿ