ಮೊದಲ ಟೆಸ್ಟ್‌ನ ಜಯದಲ್ಲಿ ವಿರಾಟ್ ಕೊಹ್ಲಿ ಬಳಗ ಮುರಿದ ದಾಖಲೆಗಳ ಪಟ್ಟಿ

ಮಂಗಳವಾರ, 26 ಜುಲೈ 2016 (13:36 IST)
ಭಾರತ ಕ್ರಿಕೆಟ್ ತಂಡವು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ತಮ್ಮ ಗೆಲುವಿನ ಓಟ ಮುಂದುವರಿಸಿದ್ದು, ವೆಸ್ಟ್ ಇಂಡೀಸ್ ತಂಡದ ವಿರುದ್ಧ ಮನೋಜ್ಞ ಪ್ರದರ್ಶನ ನೀಡಿ ಆಟದ ಎಲ್ಲಾ ವಿಭಾಗಗಳಲ್ಲಿ ಆತಿಥೇಯರನ್ನು ಹಿಂದಿಕ್ಕಿದರು. ನಾಲ್ಕು ದಿನಗಳಲ್ಲಿ ಮುಗಿದ ಟೆಸ್ಟ್‌ನಲ್ಲಿ ಭಾರತದ ಕ್ರಿಕೆಟರುಗಳು ಮುರಿದ ಕೆಲವು ದಾಖಲೆಗಳು ಕೆಳಗಿವೆ.
 
ಕೊಹ್ಲಿ ದ್ವಿಶತಕ ದಾಖಲಿಸುವ ಮೂಲಕ ವಿದೇಶದ ಟೆಸ್ಟ್‌ನಲ್ಲಿ ದ್ವಿಶತಕ ಗಳಿಸಿದ ಮೊದಲ ನಾಯಕರೆಂಬ ಶ್ರೇಯಕ್ಕೆ ಪಾತ್ರರಾದರು.
ಉಪಖಂಡದ ಹೊರಗೆ ಇನ್ನಿಂಗ್ಸ್ ಮತ್ತು 92 ರನ್‌ಗಳಿಂದ ಜಯದ ಅಂತರವು ಭಾರತ ತಂಡದ ಅತೀ ಹೆಚ್ಚು ಸ್ಕೋರಾಗಿದೆ.
 ಟೆಸ್ಟ್‌ಗಳಲ್ಲಿ ಭಾರತೀಯ ಬೌಲರ್‌ ಅತೀ ವೇಗದಲ್ಲಿ ಕಬಳಿಸಿದ 50 ವಿಕೆಟ್‌ಗಳ ದಾಖಲೆಯನ್ನು ಮೊಹಮ್ಮದ್ ಶಮಿ ಸಮಗೊಳಿಸಿದ್ದಾರೆ.
 
ರವಿಚಂದ್ರನ್ ಅಶ್ವಿನ್ ಏಷ್ಯಾದ ಹೊರಗೆ ಮೊದಲ ಬಾರಿಗೆ ಐದು ವಿಕೆಟ್ ಕಬಳಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 183 ವಿಕೆಟ್‌ಗಳೊಂದಿಗೆ, 33 ಟೆಸ್ಟ್‌ಗಳ ಬಳಿಕ ಅಶ್ವಿನ್ ಅತೀ ಹೆಚ್ಚು ವಿಕೆಟ್ ಗಳಿಸಿದ ಸ್ಪಿನ್ನರ್ ಆಗುವ ಮೂಲಕ ಇನ್ನೊಂದು ದಾಖಲೆ ನಿರ್ಮಿಸಿದರು. ವೃದ್ಧಿಮಾನ್ ಸಹಾ ವೆಸ್ಟ್ ಇಂಡೀಸ್ ಟೆಸ್ಟ್‌ನ ಇನ್ನಿಂಗ್ಸ್‌ನಲ್ಲಿ ಯಾವುದೇ ವಿಕೆಟ್‌ಕೀಪರ್‌ಗಿಂತ ಅತೀ ಹೆಚ್ಚು ಔಟ್‌‍ಗಳನ್ನು ಮಾಡಿದ ವಿಕೆಟ್ ಕೀಪರ್ ಎಂಬ ಶ್ರೇಯಕ್ಕೆ ಪಾತ್ರರಾದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ