ಬಿಸಿಸಿಐ ಪದಾದಿಕಾರಿಗಳ ವಜಾಕ್ಕೆ ಶಿಫಾರಸ್ಸು ಮಾಡಿದ ಲೋಧಾ ಸಮಿತಿ

ಮಂಗಳವಾರ, 22 ನವೆಂಬರ್ 2016 (09:05 IST)
ನವದೆಹಲಿ: ಬಿಸಿಸಿಐಗೆ ಲೋಧಾ ಸಮಿತಿ ಮತ್ತೊಂದು ಸಂಕಷ್ಟ ತಂದೊಡ್ಡಿದೆ. ಬಿಸಿಸಿಐ ಸಂಸ್ಥೆಯನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಲೋಧಾ ಸಮಿತಿ ಎಲ್ಲಾ ಪದಾದಿಕಾರಿಗಳ ವಜಾ ಮಾಡಲು ಶಿಫಾರಸ್ಸು ಮಾಡಿದೆ.

ಪದಾದಿಕಾರಿಗಳ ಆಡಳಿತವನ್ನು ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಕೈಗೊಪ್ಪಿಸಬೇಕು ಎಂದು ಶಿಫಾಸ್ಸು ಸಲ್ಲಿಸಿದೆ. ಅಲ್ಲದೆ ತನ್ನ ಆದೇಶವನ್ನು ಪಾಲಿಸಲು ಹಿಂದೇಟು ಹಾಕುತ್ತಿರುವ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಎಲ್ಲಾ ಪದಾದಿಕಾರಿಗಳನ್ನು ವಜಾಗೊಳಿಸಬೇಕು ಎಂಬ ಪ್ರಸ್ತಾಪವನ್ನು ಸುಪ್ರೀಂ ಕೋರ್ಟ್ ಮುಂದಿಟ್ಟಿದೆ.

ಅಲ್ಲದೆ ಪದಾದಿಕಾರಿಗಳ ವಯೋಮಿತಿ 70 ವರ್ಷ ದಾಟಬಾರದು ಮತ್ತು ಒಂದು ರಾಜ್ಯಕ್ಕೆ ಒಂದೇ ಮತ ಎಂಬ ನಿಯಮವಿರಬೇಕು. ಅಲ್ಲದೆ ಪದಾದಿಕಾರಿಗಳಿಗೆ 9 ವರ್ಷ ಮಾತ್ರ ಅಧಿಕಾರವಿರಬೇಕು ಹಾಗೂ 3 ವರ್ಷದ ನಂತರ ಕಡ್ಡಾಯ ವಿಶ್ರಾಂತಿ ಪಡೆಯಬೇಕು ಎಂಬಿತ್ಯಾದಿ ಸಲಹೆಗಳನ್ನು ಸಮಿತಿ ನ್ಯಾಯಾಲದ ಮುಂದಿಟ್ಟಿದೆ. ಇದನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿದ್ದೇ ಆದಲ್ಲಿ ಮತ್ತೆ ಬಿಸಿಸಿಐ ಸಂಕಷ್ಟಕ್ಕೆ ಸಿಲುಕಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ