ಐಪಿಎಲ್ ಟಿವಿ ಹಕ್ಕುಗಳ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ: ಲೋಧಾ ಸಮಿತಿ

ಶುಕ್ರವಾರ, 29 ಜುಲೈ 2016 (19:05 IST)
ಐಪಿಎಲ್ ಟಿವಿ ಹಕ್ಕುಗಳನ್ನು ನೀಡುವುದಕ್ಕೆ ಕುರಿತಂತೆ ಸೋನಿ ಪಿಕ್ಚರ್ಸ್ ನೆಟ್‌ವರ್ಕ್ ಜತೆಗೆ ಬಿಸಿಸಿಐ ಖಾಸಗಿ ಮಾತುಕತೆ ನಡೆಸುವುದಕ್ಕೆ ಲೋಧಾ ಸಮಿತಿ ವಿರೋಧಿಸಿದೆ. ಭ್ರಷ್ಟ ಆಚರಣೆಗಳ ಸಾಧ್ಯತೆಯನ್ನು ತಪ್ಪಿಸಲು ಪಾರದರ್ಶಕ ಬಿಡ್ಡಿಂಗ್ ಪ್ರಕ್ರಿಯೆ ಇರಬೇಕೆಂದು ಸಮಿತಿ ಬಯಸಿದೆ. ಇಂತಹ ದೊಡ್ಡ ಪ್ರಮಾಣದ ಟಿವಿ ಪ್ರಸಾರ ಒಪ್ಪಂದವನ್ನು ಹೆಚ್ಚು ಬಿಡ್ಡರ್‌ಗಳನ್ನು ಆಹ್ವಾನಿಸುವ ಮೂಲಕ ನಿರ್ವಹಿಸಬೇಕೆಂದು ಲೋಧಾ ಸಮಿತಿ ಬಯಸಿದೆ.
 
ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಕಾಲಾವಧಿಯಲ್ಲಿ 425 ಕೋಟಿ ರೂ. ಫೆಸಿಲಿಟೇಷನ್ ಶುಲ್ಕ ಪಾವತಿ ಮಾಡಿದ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಮಾಡಿತ್ತು. ಇಂತಹ ವ್ಯವಸ್ಥೆ ಉತ್ತೇಜಿಸುವುದರ ವಿರುದ್ಧ ಸಮಿತಿ ವಿರೋಧಿಸಿದೆ.  ಬಿಡ್ಡಿಂಗ್‌ನಲ್ಲಿ ಹೆಚ್ಚು ಕಂಪನಿಗಳು ಒಳಗೊಳ್ಳುವಂತೆ ಮಾಡಲು ಪಾರದರ್ಶಕ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಪ್ರಸ್ತಾಪಿಸಲಾಗಿದ್ದು, ಇದನ್ನು ಅನುಸರಿಸಬೇಕು ಎಂದು ಲೋಧಾ ಸಮಿತಿಯ ಮೂಲವೊಂದು ತಿಳಿಸಿದೆ.
 
ಬಿಸಿಸಿಐ ಮೊದಲಿಗೆ ಐಪಿಎಲ್ ಟಿವಿ ಹಕ್ಕುಗಳಿಗೆ ಬಿಡ್ಡಿಂಗ್ ಪ್ರಕ್ರಿಯೆಯನ್ನು ಮಾಡಬೇಕು ಎಂದು ಲೋಧಾ ಸಮಿತಿ ಸಲಹೆ ಮಾಡಿದ್ದು, ಅತ್ಯಧಿಕ ಬಿಡ್ ಮೊತ್ತವನ್ನು ನೀಡುವಂತೆ ಸೋನಿಗೆ ಕೇಳಬೇಕು ಎಂದು ಹೇಳಿದೆ.

ವೆಬ್ದುನಿಯಾವನ್ನು ಓದಿ