ನವದೆಹಲಿ: ಬಿಸಿಸಿಐ ಮೇಲೆ ಲೋಧಾ ಸಮಿತಿ ಮತ್ತೊಮ್ಮೆ ಕಿಡಿ ಕಾರಿದೆ. ಇಂಗ್ಲೆಂಡ್ ಪ್ರವಾಸದ ಬಗ್ಗೆ ಕೆಲವು ಸ್ಪಷ್ಟನೆ ಕೇಳಿದ್ದ ಬಿಸಿಸಿಐಗೆ ಇದು ನಮಗೆ ಸಂಬಂಧಿಸಿದ್ದಲ್ಲ. ಮೊದಲು ನಾವು ಕೇಳಿರುವ ವಿಷಯಗಳ ಬಗ್ಗೆ ಮುಚ್ಚಳಿಕೆ ಕೊಡಿ. ಮುಂದಿನ ಮಾತು ಆಮೇಲೆ ಎಂದು ಖಡಕ್ಕಾಗಿ ತಿರುಗೇಟು ನೀಡಿದೆ.
ಇದರಿಂದ ಬಿಸಿಸಿಐ ಇಕ್ಕಟ್ಟಿಗೆ ಸಿಲುಕಿದೆ. ಇಂಗ್ಲೆಂಡ್ ಪ್ರವಾಸದ ಸಂದರ್ಭ ಹಣಕಾಸಿನ ವ್ಯವಹಾರ ನಡೆಸಬೇಕಾಗುತ್ತದೆ. ಆದರೆ ಇತ್ತೀಚೆಗೆ ಮುಚ್ಚಳಿಕೆ ಕೊಡದೆ ಹಣಕಾಸಿನ ವ್ಯವಹಾರ ನಡೆಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ನಿರ್ದೇಶಿಸಿತ್ತು. ಹೀಗಾಗಿ ಬಿಸಿಸಿಐ ಈ ಸರಣಿಗೆ ಬೇಕಾದ ಹಣಕಾಸಿನ ವ್ಯವಹಾರ ನಡೆಸುವುದು ಹೇಗೆಂದು ಸಲಹೆ ಕೇಳಿತ್ತು. ಇದಕ್ಕೆ ಲೋಧಾ ಸಮಿತಿ ಹೀಗೆ ಉತ್ತರಿಸಿದೆ.
ಮೊದಲು ಸುಪ್ರೀಂ ಕೋರ್ಟ್ ಆದೇಶವನ್ನು ಯಾವ ರೀತಿ ಪಾಲಿಸುತ್ತಿದ್ದೀರಿ ಎಂದು ವಿವರಣೆ ಕೊಡಿ. ನಂತರ ಇಂಗ್ಲೆಂಡ್ ಪ್ರವಾಸದ ಬಗ್ಗೆ ಸಲಹೆ ಕೊಡುತ್ತೇವೆ ಎಂದು ಖಡಕ್ಕಾಗಿ ಹೇಳಿದೆ. ಹೀಗಾಗಿ ಕೂಡಲೇ ಮುಚ್ಚಳಿಕೆ ಬರೆದುಕೊಡಬೇಕಾದ ಅನಿವಾರ್ಯತೆಯಲ್ಲಿ ಬಿಸಿಸಿಐ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ