ಎರಡು ಅಭ್ಯಾಸ ಪಂದ್ಯಗಳಲ್ಲಿ ಎರಡು ಅರ್ಧಶತಕಗಳೊಂದಿಗೆ, ಭಾರತದ ಬ್ಯಾಟ್ಸ್‌ಮನ್ ಲೋಕೇಶ್ ರಾಹುಲ್ ಅಕ್ಷರಶಃ ಟೆಸ್ಟ್ ಸ್ಥಾನಕ್ಕೆ ಹಕ್ಕು ಪ್ರತಿಪಾದನೆ ಮಾಡಿದಂತಾಗಿದೆ. ಆಯ್ಕೆಯು ನನ್ನ ನಿಯಂತ್ರಣದಲ್ಲಿರುವುದಿಲ್ಲ. ಟೆಸ್ಟ್ ಆರಂಭಕ್ಕೆ ಇನ್ನೂ ಒಂದು ವಾರವಿದ್ದು, ಕೆಲವು ದಿನಗಳಲ್ಲಿ ಯಾರು ಆಡುತ್ತಾರೆ, ಯಾರು ಆಡುವುದಿಲ್ಲ ಎಂದು ಗೊತ್ತಾಗುತ್ತದೆ ಎಂದು ಡಬ್ಲ್ಯುಐಸಿಬಿ ಅಧ್ಯಕ್ಷರ ಇಲೆವನ್ ವಿರುದ್ಧ ಎರಡನೇ ದಿನದಾಟದ ನಂತರ ಹೇಳಿದರು.