ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 416 ರನ್ ಸ್ಕೋರ್‌ಗೆ ಉತ್ತರವಾಗಿ ಶ್ರೀಲಂಕಾ 288 ರನ್ ಸ್ಕೋರ್ ಮಾಡಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 7 ವಿಕೆಟ್ ಕಳೆದುಕೊಂಡು 233 ರನ್ ಗಳಿಸಿತು. ಶ್ರೀಲಂಕಾ 2ನೇ ಇನ್ನಿಂಗ್ಸ್‌ನಲ್ಲಿ ಗೆಲುವಿಗೆ 362 ರನ್ ಗುರಿಯನ್ನು ಮುಟ್ಟಬೇಕಿತ್ತು. ಆದರೆ 78 ರನ್ ಗಳಿಸುವಷ್ಟರಲ್ಲಿ ಮಳೆಯ ದೆಸೆಯಿಂದ ಪಂದ್ಯ ಡ್ರಾ ಎಂದು ಘೋಷಿಸಲಾಯಿತು. ಶ್ರೀಲಂಕಾ ಕೌಶಲ್ ಸಿಲ್ವಾ ವಿಕೆಟ್ ಮಾತ್ರ ಕಳೆದುಕೊಂಡಿದೆ.
ಇಂಗ್ಲೆಂಡ್ ಲೀಡ್ಸ್ ಮತ್ತು ಚೆಸ್ಟರ್ ಎ ಸ್ಟ್ರೀಟ್‌ನಲ್ಲಿ ಜಯಗಳಿಂದ 2-0ಯಿಂದ ಮುನ್ನಡೆ ಗಳಿಸಿ ಸರಣಿ ಗೆದ್ದುಕೊಂಡಿದೆ. ಶ್ರೀಲಂಕಾ ಶನಿವಾರ ಎರಡು ಏಕದಿನ ಪಂದ್ಯಗಳನ್ನು ಆಡಲು ಐರ್ಲೆಂಡ್‌ಗೆ ತೆರಳಲಿದ್ದು, ಪುನಃ ಇಂಗ್ಲೆಂಡ್‌ಗೆ ಮರಳಿ ಐದು ಏಕದಿನ ಪಂದ್ಯಗಳು ಮತ್ತು ಒಂದು ಟ್ವೆಂಟಿ 20 ಪಂದ್ಯವನ್ನು ಆಡಲಿದೆ.