ಐಪಿಎಲ್ ಸ್ಪಾಟ್ ಫಿಕ್ಸಿಂಗ್: ಮಧ್ಯಂತರ ತಡೆ ನೀಡಲು ಮದ್ರಾಸ್ ಹೈಕೋರ್ಟ್ ನಕಾರ

ಗುರುವಾರ, 27 ಆಗಸ್ಟ್ 2015 (17:41 IST)
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದ ಘಟನೆಗಳು ಆಸಕ್ತಿಕರ ತಿರುವು ಪಡೆದಿದ್ದು,  ಮದ್ರಾಸ್ ಹೈಕೋರ್ಟ್ ಪೀಠವು ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿತು.  ಸಿಎಸ್‌ಕೆ ತಂಡವು ನ್ಯಾಯಮೂರ್ತಿ ಲೋಧಾ ಸಮಿತಿಯ ಶಿಫಾರಸ್ಸನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
 
ಸಿಎಸ್‌ಕೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಪ್ರಕರಣದ ಇಬ್ಬರು ಪ್ರತಿವಾದಿಗಳಾದ ಬಿಸಿಸಿಐ ಮತ್ತು ಇಂಡಿಯಾ ಸಿಮೆಂಟ್ಸ್‌ಗೆ ಪ್ರತಿ ಅರ್ಜಿಗಳನ್ನು ಸಲ್ಲಿಸುವಂತೆ ಸೂಚಿಸಿ ಸೆಪ್ಟೆಂಬರ್ 23ಕ್ಕೆ ವಿಚಾರಣೆಯನ್ನು ಮುಂದೂಡಿತು. 
 
ಸಿಎಸ್‌ಕೆಸಿಎಲ್ ಚೆನ್ನೈ ಮೂಲದ ಫ್ರಾಂಚೈಸಿಗೆ ಐಸಿಎಲ್‌ನಿಂದ  ಮಾಲೀಕತ್ವ ಬದಲಾವಣೆಯ ಹಕ್ಕುಗಳನ್ನು ಪಡೆದುಕೊಂಡಿತ್ತಲ್ಲದೇ ಬಿಸಿಸಿಐ ಅದಕ್ಕೆ ಅನುಮೋದನೆ ನೀಡಿತ್ತು. 
ಇದಲ್ಲದೇ ನ್ಯಾಯಪೀಠವು ಬಿಹಾರ ಕ್ರಿಕೆಟ್ ಸಂಸ್ಥೆಗೆ ಎರಡು ವಾರಗಳಲ್ಲಿ ಪ್ರತಿ ಅರ್ಜಿ ಸಲ್ಲಿಸುವಂತೆಯೂ ತಿಳಿಸಿದೆ. 

ವೆಬ್ದುನಿಯಾವನ್ನು ಓದಿ