ಮಹಾರಾಷ್ಟ್ರ: ಏಪ್ರಿಲ್ 30 ರಿಂದ ಎಲ್ಲಾ ಐಪಿಎಲ್ ಪಂದ್ಯಗಳು ಹೊರ ರಾಜ್ಯಗಳಿಗೆ ಶಿಫ್ಟ್

ಬುಧವಾರ, 27 ಏಪ್ರಿಲ್ 2016 (13:01 IST)
ಮಹಾರಾಷ್ಟ್ರದಿಂದ ಎಲ್ಲಾ ಐಪಿಎಲ್ ಪಂದ್ಯಗಳ ಸ್ಥಳಾಂತರಗೊಳಿಸುವಂತೆ ಮುಂಬೈ ಹೈಕೋರ್ಟ್ ನೀಡಿದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಕೋರ್ಟ್ ಹೈಕೋರ್ಟ್ ತೀರ್ಪು ಸರಿಯಾಗಿದೆ ಎಂದು ಪುರಸ್ಕರಿಸಿದೆ.
 
 ಮುಂಬೈನಲ್ಲಿ ಐಪಿಎಲ್ ಫೈನಲ್ ಪಂದ್ಯ ನಡೆಯಬೇಕಾಗಿತ್ತು. ಆದರೆ ಮೇ ನಂತರ ಎಲ್ಲಾ ಪಂದ್ಯಗಳು ಮಹಾರಾಷ್ಟ್ರದಿಂದ ಸ್ಥಳಾಂತರವಾಗುವುದರಿಂದ 2016ರ ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆ ಹೆಚ್ಚಾಗಿದೆ.
 
 ಐಪಿಎಲ್ ಆಡಳಿತ ಮಂಡಳಿಯ ಅಧ್ಯಕ್ಷ ರಾಜೀವ್ ಶುಕ್ಲಾ , ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯವನ್ನು ಬೆಂಗಳೂರಿಗೆ ಮತ್ತು ಎರಡನೇ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯವನ್ನು ಕೋಲ್ಕತಾಗೆ ಸ್ಥಳಾಂತರಿಸಬೇಕೆಂದು  ಪ್ರಸ್ತಾಪಿಸಿದ್ದಾರೆ. 
 
 ಇವು ಕೇವಲ ಶಿಫಾರಸುಗಳಾಗಿದ್ದು, ಐಪಿಎಲ್ ಆಡಳಿತ ಮಂಡಳಿ ಅದಕ್ಕೆ ಅಂಗೀಕಾರ ನೀಡಬೇಕಾಗಿದೆ. ಫ್ರಾಂಚೈಸಿಗಳು ಮತ್ತು ಐಪಿಎಲ್ ಅಧಿಕಾರಿಗಳ ನಡುವೆ ಭೇಟಿಯಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರೈಸಿಂಗ್ ಪುಣೆಗೆ ಹೊಸ ತವರು ಪಿಚ್‌ಗಳಿಗಾಗಿ ನಾಲ್ಕು ಭಿನ್ನ ಆಯ್ಕೆಗಳನ್ನು  ನೀಡಲಾಗಿತ್ತು. ಅವು ರಾಯ್ಪುರ, ವಿಶಾಖಪಟ್ನಂ, ಕಾನ್ಪುರ ಮತ್ತು ಜೈಪುರ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ