ಧೋನಿ ಶ್ರೇಷ್ಟ ನಾಯಕ: ಸಾರಿಹೇಳುವ ಅಂಕಿಅಂಶಗಳು, ಕ್ರಿಕೆಟರುಗಳು

ಗುರುವಾರ, 21 ಏಪ್ರಿಲ್ 2016 (11:33 IST)
ಮಹೇಂದ್ರ ಸಿಂಗ್ ಧೋನಿ ಭಾರತೀಯ ಕ್ರಿಕೆಟ್ ರಂಗದಲ್ಲಿ ಮಾತ್ರವಲ್ಲದೇ ವಿಶ್ವಕ್ರಿಕೆಟ್‌ನಲ್ಲಿ ಕೂಡ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿದ್ದಾರೆ. ಕೆಲವರು ಈ ಕುರಿತು ವಾದ ಮಾಡಬಹುದು. ಆದರೆ ಯಶಸ್ಸಿನ ಕುರಿತಂತೆ ಅಂಕಿ, ಅಂಶಗಳು ಸುಳ್ಳುಹೇಳುವುದಿಲ್ಲ. 
 
ಬ್ಯಾಟ್ಸ್‌ಮನ್ ಮತ್ತು ವಿಕೆಟ್‌ಕೀಪರ್ ಆಗಿ ಕೊಡುಗೆ ನೀಡಿದ್ದಲ್ಲದೇ ಎಲ್ಲಾ ಮೂರು ಸ್ವರೂಪದ ಆಟಗಳಲ್ಲಿ ನಾಯಕತ್ವದ ಹೆಚ್ಚುವರಿ ಜವಾಬ್ದಾರಿಯನ್ನು ದೇಶಕ್ಕಾಗಿ ಹೊತ್ತಿದ್ದಾರೆ.
 ಧೋನಿ ಅವರನ್ನು ಬರೀ ಅಭಿಮಾನಿಗಳು ಮಾತ್ರ ಮೆಚ್ಚುವುದಿಲ್ಲ, ಧೋನಿಯ ನಾಯಕತ್ವ ಗುಣಗಳು ಮತ್ತು ಕ್ರೀಡಾಮನೋಭಾವದ ಬಗ್ಗೆ ಅನೇಕ ಕ್ರಿಕೆಟರುಗಳು ಶ್ಲಾಘಿಸಿದ್ದಾರೆ. 
 
ನನ್ನ ಜತೆ ಆಡಿದ ನಾಯಕರಲ್ಲಿ ಧೋನಿ ಅತ್ಯುತ್ತಮ ನಾಯಕ-ಸಚಿನ್ ತೆಂಡೂಲ್ಕರ್ 
ನಾನು ಧೋನಿಯ ನಾಯಕತ್ವ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಏಕೆಂದರೆ ಅವರು ಜಗತ್ತಿನಲ್ಲೇ ಅತ್ಯುತ್ತಮ ಕ್ರಿಕೆಟ್ ನಾಯಕರ ಪೈಕಿ ಒಬ್ಬರಾಗಿದ್ದಾರೆ- ಡ್ವಾನ್ ಬ್ರೇವೋ
ಧೋನಿ ನಾಯಕತ್ವದಲ್ಲಿ ಆಡಲು ನಾನು ನಿಜವಾಗಲೂ ಅದೃಷ್ಟವಂತ-ಮೈಕೇಲ್ ಹಸ್ಸಿ 
 
ಧೋನಿ ನಮ್ಮ ರಾಷ್ಟ್ರದ ಮಹಾನ್ ನಾಯಕ ಎನ್ನುವುದಕ್ಕೆ ಅವರ ದಾಖಲೆ ಸಾಕ್ಷಿಯೊದಗಿಸುತ್ತದೆ- ಸೌರವ್ ಗಂಗೂಲಿ 
ಧೋನಿಯ ನಾಯಕತ್ವವನ್ನು ಯಾರೂ ಪ್ರಶ್ನಿಸುವುದಕ್ಕೆ ಸಾಧ್ಯವಿಲ್ಲ- ವಿರಾಟ್ ಕೊಹ್ಲಿ
ಧೋನಿ ಹೇಳಿದರೆ ನಾನು ಸಾಯುವುದಕ್ಕೂ ಸಿದ್ಧ-ರವಿಚಂದ್ರನ್ ಅಶ್ವಿನ್
ಧೋನಿ ನಾಯಕರ ತಂಡದಲ್ಲಿ ಏಕಮಾತ್ರ ನಾಯಕ-ಬ್ರೆಂಡನ್ ಮೆಕಲಂ

ವೆಬ್ದುನಿಯಾವನ್ನು ಓದಿ