ಧೋನಿ, ಜಸ್‌ಪ್ರೀತ್ ಬುಮ್ರಾ ಟಿ 20 ಪಂದ್ಯಗಳಿಗೆ ಅಮೆರಿಕಕ್ಕೆ ಪ್ರಯಾಣ

ಬುಧವಾರ, 3 ಆಗಸ್ಟ್ 2016 (19:47 IST)
ವೆಸ್ಟ್ ಇಂಡೀಸ್ ವಿರುದ್ಧ ಅಮೆರಿಕದಲ್ಲಿ ಆಡುವ ಎರಡು ಟಿ20 ಪಂದ್ಯಗಳಲ್ಲಿ ಎಂ.ಎಸ್.ಧೋನಿ ಮತ್ತು ವೇಗಿ ಜಸ್‌ಪ್ರೀತ್ ಬುಮ್ರಾ ಅವರು ತಂಡವನ್ನು ಸೇರಲಿದ್ದಾರೆಂದು ವರದಿಯಾಗಿದೆ. ಮುರಳಿ ವಿಜಯ್, ಪೂಜಾರಾ, ಸಹಾ, ಸ್ಟುವರ್ಟ್ ಬಿನ್ನಿ, ಶಾರ್ದುಲ್ ಠಾಕುರ್ ಮತ್ತು ಉಮೇಶ್ ಯಾದವ್ ಅವರನ್ನು ಹೊರತುಪಡಿಸಿ ಭಾರತದ  ಪ್ರಸಕ್ತ ಟೆಸ್ಟ್ ತಂಡದ ಉಳಿದ ಆಟಗಾರರು ನಾಲ್ಕು ಟೆಸ್ಟ್ ಪಂದ್ಯಗಳ ಬಳಿಕ ನೇರವಾಗಿ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
 
ಇದೊಂದು ಕಿರು ಪ್ರವಾಸವಾಗಿದ್ದರಿಂದ 14 ಆಟಗಾರರ ತಂಡದೊಂದಿಗೆ ಭಾರತ ತೆರಳಲಿದೆ. ಧೋನಿ ಮತ್ತು ಬುಮ್ರಾ ಅಮೆರಿಕದಲ್ಲಿ ನೇರವಾಗಿ ತಂಡವನ್ನು ಸೇರಲಿದ್ದಾರೆ ಎಂದು ಮೂಲವೊಂದು ತಿಳಿಸಿದೆ. ಅಮೆರಿಕದಲ್ಲಿ ಅಪಾರ ಪ್ರಮಾಣದ ಭಾರತೀಯ ಮೂಲದ ಜನಸಂಖ್ಯೆ ಇರುವುದರಿಂದ, ಭಾರತ ಕ್ರಿಕೆಟ್ ತಂಡವು ಎರಡು ಪಂದ್ಯಗಳ ಸರಣಿಯಲ್ಲಿ ವಿಪುಲವಾದ ಬೆಂಬಲವನ್ನು ಪಡೆಯಲಿದೆ.

ಆದರೆ ಈ ಪ್ರಕ್ರಿಯೆಯಲ್ಲಿ ಆಗಸ್ಟ್ 23ರಂದು ನಡೆಯುವ ದುಲೀಪ್ ಟ್ರೋಫಿ ತೊಂದರೆಗೆ ಸಿಕ್ಕಿಬೀಳಲಿದೆ. ದುಲೀಪ್‌ ಟ್ರೋಫಿಯಲ್ಲಿ ನಸುಗೆಂಪು ಬಣ್ಣದ ಚೆಂಡಿನೊಂದಿಗೆ ಹಗಲು ರಾತ್ರಿ ಪಂದ್ಯವಾಡಲಿದ್ದು, ಎಲ್ಲ ಪ್ರಮುಖ ಆಟಗಾರರು ಟೂರ್ನಿಯ ಭಾಗವಾಗಲು ಬಿಸಿಸಿಐ ಬಯಸಿತ್ತು. ಆದರೆ ಇದೇ ವೇಳೆಯಲ್ಲಿ ಟಿ 20 ಸರಣಿ ಅಮೆರಿಕದಲ್ಲಿರುವುದರಿಂದ ದುಲೀಪ್ ಟ್ರೋಫಿಯಲ್ಲಿ ಪ್ರಮುಖ ಆಟಗಾರರಿಲ್ಲದೇ ಬಣಗುಡುವಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ