ರಾಂಚಿ: ಈ ಬಾರಿ ಏನೇ ಆದರೂ ರಣಜಿ ಗೆದ್ದೇ ಗೆಲ್ಲುವ ಉತ್ಸಾಹದಲ್ಲಿ ಜಾರ್ಖಂಡ್ ಇದೆ. ಅದಕ್ಕಾಗಿ ಸಕಲ ಪ್ರಯತ್ನ ನಡೆಸುತ್ತಿದೆ. ಅತ್ತ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡಾ ತವರು ತಂಡದ ಬೆಂಬಲಕ್ಕೆ ನಿಂತಿದ್ದು, ಸೆಮಿಫೈನಲ್ ನಲ್ಲಿ ತಂಡದ ಜತೆಗಿರಲಿದ್ದಾರೆ.
ಆದರೆ ಸೆಮಿಫೈನಲ್ ನಲ್ಲಿ ಆಡುತ್ತಿಲ್ಲ. ಯಾಕೆಂದರೆ ಧೋನಿ ಟೆಸ್ಟ್ ಮಾದರಿಯ ಪಂದ್ಯಗಳಿಗೆ ವಿದಾಯ ಹೇಳಿದ್ದಾರೆ. ಆದರೆ ಸೆಮಿಫೈನಲ್ ಆಡುವ ತಂಡದ ಜತೆಗೆ ಪೆವಿಲಿಯನ್ ನಲ್ಲಿ ಕುಳಿತು ಕಾಲ ಕಾಲಕ್ಕೆ ಸಲಹೆ ಕೊಡುತ್ತಿರುತ್ತಾರೆ.
ಅವರ ಸಲಹೆ ಹಲವು ಬಾರಿ ಜಾರ್ಖಂಡ್ ತಂಡಕ್ಕೆ ಉಪಯೋಗವಾಗಿದೆ. ಈಗಾಗಲೇ ರಣಜಿ ಪಂದ್ಯದಲ್ಲಿ ಯಶಸ್ಸಿಗೆ ಧೋನಿಯೇ ಕಾರಣ ಎಂದು ವಿಕೆಟ್ ಕೀಪರ್ ಇಶಾನ್, ನದೀಮ್ ಹೇಳಿಕೊಂಡಿದ್ದಾರೆ. ಇದೀಗ ನಿರ್ಣಾಯಕ ಪಂದ್ಯಕ್ಕೆ ಸಲಹೆಗಾರರಾಗಿ ತಂಡಕ್ಕೆ ಬಂದಿರುವುದು ಜಾರ್ಖಂಡ್ ತಂಡಕ್ಕೆ ಆನೆ ಬಲ ಬಂದಂತಾಗಿದೆ.
ಜಾರ್ಖಂಡ್ ತಮಿಳುನಾಡು ವಿರುದ್ಧ ಸೆಮಿಫೈನಲ್ ಆಡುತ್ತಿದೆ. ಎದುರಾಳಿ ತಂಡದ ಕೆಲವು ಆಟಗಾರರೊಂದಿಗೆ ಐಪಿಎಲ್ ನಲ್ಲಿ ಆಡಿದ ಅನುಭವ ಧೋನಿಗಿದೆ. ಹೀಗಾಗಿ ಅವರ ಹುಳುಕುಗಳೇನು ಎಂದು ಅವರಿಗೆ ಚೆನ್ನಾಗಿ ಗೊತ್ತು. ಇದು ಜಾರ್ಖಂಡ್ ಗೆ ಪ್ಲಸ್ ಪಾಯಿಂಟ್.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ