ನಾಲ್ಕನೇ ಟೆಸ್ಟ್ ಗೆ ಟೀಂ ಇಂಡಿಯಾ ಬೌಲಿಂಗ್ ವಿಭಾಗಕ್ಕೆ ಮೇಜರ್ ಸರ್ಜರಿ

ಮಂಗಳವಾರ, 31 ಆಗಸ್ಟ್ 2021 (09:12 IST)
ಲಂಡನ್: ಮೂರನೇ ಟೆಸ್ಟ್ ಸೋಲಿನ ಬಳಿಕ ಕಂಗೆಟ್ಟಿರುವ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಗೆ ಮುನ್ನ ತಂಡದ ಬೌಲಿಂಗ್ ವಿಭಾಗಕ್ಕೆ ಮೇಜರ್ ಸರ್ಜರಿ ಮಾಡಲು ತೀರ್ಮಾನಿಸಿದೆ.


ಈಗಾಗಲೇ ರವೀಂದ್ರ ಜಡೇಜಾ ಗಾಯಗೊಂಡಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ರವಿಚಂದ್ರನ್ ಅಶ್ವಿನ್ ಆಡುವುದು ಬಹುತೇಕ ಖಚಿತವಾಗಿದೆ.

ಅವರ ಹೊರತಾಗಿ ಹಿರಿಯ ವೇಗಿ ಇಶಾಂತ್ ಶರ್ಮಾ ವಿಕೆಟ್ ಕೀಳಲು ವಿಫಲರಾಗಿದ್ದು, ಅವರಿಗೂ ಕೊಕ್ ನೀಡುವ ಸಾಧ‍್ಯತೆಯಿದೆ. ಶ್ರಾದ್ಧೂಲ್ ಠಾಕೂರ್ ಮತ್ತೆ ಫಿಟ್ ಆಗಿ ತಂಡಕ್ಕೆ ಮರಳಲಿದ್ದಾರೆ. ವಿಪರ್ಯಾಸವೆಂದರೆ ಭಾರತದ ಬ್ಯಾಟಿಂಗ್ ದಯನೀಯ ವೈಫಲ್ಯ ಕಂಡಿತ್ತು. ಹಾಗಿದ್ದರೂ ಈ ವಿಭಾಗದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ