ಮನೀಶ್ ಪಾಂಡೆ, ಸಂಜು ಸ್ಯಾಮ್ಸನ್ ವೃತ್ತಿ ಜೀವನಕ್ಕೆ ಅರ್ಧಚಂದ್ರ

ಸೋಮವಾರ, 22 ಫೆಬ್ರವರಿ 2021 (09:37 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟಿಸಿದ ವೇಳೆ ಟೀಂ ಇಂಡಿಯಾದಲ್ಲಿ ಪ್ರಮುಖವಾಗಿ ಮಿಸ್ ಆಗಿರುವುದು ಕನ್ನಡಿಗ ಮನೀಶ್ ಪಾಂಡೆ ಮತ್ತು ಸಂಜು ಸ್ಯಾಮ್ಸನ್ ಹೆಸರುಗಳು.


ಇಬ್ಬರ ಬದಲಿಗೆ ಸೂರ್ಯಕಾಂತ್ ಯಾದವ್, ಇಶಾನ್ ಕಿಶಾನ್, ರಾಹುಲ್ ತೆವಾತಿಯಾರಂತಹ ಹೊಸ ಮುಖಗಳಿಗೆ ಬಿಸಿಸಿಐ ಮಣೆ ಹಾಕಿದೆ. ಇದು ಸ್ವಾಗತಾರ್ಹ ಬೆಳವಣಿಗೆಯೇ ಆದರೆ ಪಾಂಡೆ ಮತ್ತು ಸ್ಯಾಮ್ಸನ್ ಗೆ ಆಡುವ ಬಳಗದಲ್ಲಿ ಹೆಚ್ಚು ಅವಕಾಶವೇ ಸಿಕ್ಕಿಲ್ಲ. ಅದರಲ್ಲೂ ಮನೀಶ್ ಪಾಂಡೆಗೆ ದೇಶೀಯ ಕ್ರಿಕೆಟ್ ನಲ್ಲೂ ಹೆಚ್ಚು ಅವಕಾಶ ಸಿಗುತ್ತಿಲ್ಲ. ಇದರಿಂದಾಗಿ ಈ ಇಬ್ಬರು ಆಟಗಾರರ ವೃತ್ತಿಜೀವನ ಗಂಡಾಂತರದಲ್ಲಿದೆ ಎಂದೇ ಹೇಳಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ