ಡೆಲ್ಲಿಯಲ್ಲಿ ಅವಕಾಶದ ಕೊರತೆಯಿಂದ ಟೀಂ ಇಂಡಿಯಾದಲ್ಲಿ ಸ್ಥಾನವಿಲ್ಲ: ಮನೋಜ್ ತಿವಾರಿ

ಶುಕ್ರವಾರ, 29 ಮೇ 2015 (12:20 IST)
ಬಂಗಾಳದ ಬ್ಯಾಟ್ಸ್‌ಮನ್ ಮನೋಜ್ ತಿವಾರಿ ತಮಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲಿ ಸೀಮಿತ ಅವಕಾಶ ನೀಡಿದ್ದರಿಂದ  ಭಾರತ ಕ್ರಿಕೆಟ್ ತಂಡಕ್ಕೆ ಪುನಃ ಕರೆಸಿಕೊಳ್ಳುವ ಸಾಧ್ಯತೆ ತಪ್ಪಿಹೋಯಿತು ಎಂದು ಹೇಳಿದ್ದಾರೆ. 
 
 ಡೆಲ್ಲಿಡೇರ್ ಡೆವಿಲ್ಸ್ ಪರ ಐದು ಪಂದ್ಯಗಳಲ್ಲಿ ತಿವಾರಿ ಆಡಿದ್ದರೂ ಕೇವಲ 2 ಪಂದ್ಯಗಳಲ್ಲಿ ಬ್ಯಾಟಿಂಗ್ ಆಡುವ ಅವಕಾಶ ಸಿಕ್ಕಿತು. ಎರಡೂ ಪಂದ್ಯಗಳನ್ನು ಕೊಲ್ಕತಾ ನೈಟ್ ವಿರುದ್ಧ ಆಡಿದ್ದು 32 ಮತ್ತು 25 ರನ್ ಸ್ಕೋರ್ ಮಾಡಿದ್ದರು. 
 
ಈ ಕುರಿತು 29 ವರ್ಷದ ಆಟಗಾರ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿ, ಐಪಿಎಲ್‌ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡುವುದಕ್ಕೆ ತಮಗೆ ಸರಿಯಾಗಿ ಅವಕಾಶ ಸಿಗಲಿಲ್ಲ. ಆದ್ದರಿಂದ ರಾಷ್ಟ್ರೀಯ ತಂಡ ತಮ್ಮನ್ನು ಹೇಗೆ ಆಯ್ಕೆ ಮಾಡುತ್ತದೆ ಎಂದು ಪ್ರಶ್ನಿಸಿದ್ದಾರೆ. 
 
ಆದಾಗ್ಯೂ, ಕ್ರಿಕ್ ಬುಜ್ ಜೊತೆ ಸಮಾಲೋಚನೆಯಲ್ಲಿ ಇಂತಹ ಯಾವುದೇ ಕಾಮೆಂಟ್ಸ್ ಮಾಡಿದ್ದನ್ನು ನಿರಾಕರಿಸಿದ್ದಾರೆ.  ತಿವಾರಿ 2014-15ರ ರಣಜಿ ಸೀಸನ್‌ನಲ್ಲಿ ಅಷ್ಟೇನೂ ಅತ್ಯುತ್ತಮ ಪ್ರದರ್ಶನ ನೀಡದೇ 26.84 ರನ್ ಸರಾಸರಿಯೊಂದಿಗೆ 349 ರನ್ ಸ್ಕೋರ್ ಮಾಡಿದ್ದರು. 
 
ಆದಾಗ್ಯೂ ಕಳೆದ ಸೀಸನ್‌ನಲ್ಲಿ ಆಡಿದ ಲಿಸ್ಟ್ -ಎ ಪಂದ್ಯಗಳಲ್ಲಿ  ಐದು ಇನ್ನಿಂಗ್ಸ್‌ಗಳಲ್ಲಿ 302 ರನ್ 60.40 ಸರಾಸರಿಯಲ್ಲಿ ಗಳಿಸಿದ್ದರು. ಪ್ರತಿಭಾಶಾಲಿ ಬ್ಯಾಟ್ಸ್‌ಮನ್ ಆಗಿದ್ದರೂ ಬಾಂಗ್ಲಾ ಪ್ರವಾಸಕ್ಕೆ ಆಯ್ಕೆಯಾಗದಿರುವ ತಿವಾರಿ ವಿಶ್ವ ಟಿ 20ಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಆಶಯ ಹೊಂದಿದ್ದಾರೆ. 

ವೆಬ್ದುನಿಯಾವನ್ನು ಓದಿ