ವಿಶ್ವಕಪ್‌ನಲ್ಲಿ ಹತ್ತು ಹಲವು ದಾಖಲೆಗಳ ನಿರ್ಮಾಣ

ಗುರುವಾರ, 26 ಫೆಬ್ರವರಿ 2015 (18:57 IST)
2015ರ ವಿಶ್ವಕಪ್‌ನಲ್ಲಿ ಹತ್ತು ಹಲವು ದಾಖಲೆಗಳು ನಿರ್ಮಾಣವಾಗಿವೆ. 1.ಇದುವರೆಗೆ ಯಾವ ಬ್ಯಾಟ್ಸ್‌ಮನ್ ಕೂಡ ಪಾಕ್ ವಿರುದ್ಧ ಶತಕ ಸಿಡಿಸಿರಲಿಲ್ಲ. ವಿರಾಟ್ ಕೊಹ್ಲಿ ಪಾಕ್ ವಿರುದ್ಧ ಶತಕ ಸಿಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

2. ವಿಶ್ವಕಪ್‌ನಲ್ಲಿ ಕ್ರಿಸ್ ಗೇಯ್ಲ್ ಡಬಲ್ ಸೆಂಚುರಿ ಸಿಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.  ಜಿಂಬಾಬ್ವೆ ವಿರುದ್ಧ ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಯ್ಲ್ 215 ರನ್ ಸಿಡಿಸುವ ಮೂಲಕ ದ್ವಿಶತಕ ಬಾರಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು.  

3. ಟೀಂ ಇಂಡಿಯಾ ಪಾಕ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಸಾಧನೆ ಮಾಡಿದೆ. 4,ದ.ಆಫ್ರಿಕಾ ವಿರುದ್ಧ ಗೆಲುವಿನ ಖಾತೆ ತೆರೆದ ಟೀಂ ಇಂಡಿಯಾ. 5, ದಾಖಲೆಯ ಅರ್ಧಶತಕ ಸಿಡಿಸಿದ ಮೆಕಲಮ್. ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಕೇವಲ 18 ಎಸೆತಗಳಲ್ಲಿ ಅರ್ಧಶಕರ ಸಿಡಿಸಿ ದಾಖಲೆ ನಿರ್ಮಿಸಿದರು. 6. ಜಿಂಬಾಬ್ವೆ ವಿರುದ್ದ ಪಂದ್ಯದಲ್ಲಿ ಗೇಲ್ ಮತ್ತು ಸ್ಯಾಮ್ಯೂಯೆಲ್ಸ್  ದಾಖಲೆಯ ಜೊತೆಯಾಟವಾಡಿದರು.

7.ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ 33 ರನ್‌ಗಳಿಗೆ 7 ವಿಕೆಟ್ ಪಡೆದ ಸಾಧನೆ ಮಾಡಿದರು. 8. ವೆಸ್ಟ್ ಇಂಡೀಸ್ ತಂಡವನ್ನು ಐರ್ಲೆಂಡ್ ಮಣಿಸಿ ದಾಖಲೆ ನಿರ್ಮಿಸಿತು. ಕ್ರಿಕೆಟ್ ಶಿಶು ಐರ್ಲೆಂಡ್ 300 ರನ್ ಚೇಸ್ ಮಾಡಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತು. 9.ಪಾಕಿಸ್ತಾನ ವೆಸ್ಟ್ ಇಂಡೀಸ್ ವಿರುದ್ಧ ಒಂದು ರನ್‌ಗೆ ನಾಲ್ಕು ವಿಕೆಟ್ ಕಳೆದುಕೊಂಡು ದಾಖಲೆ ನಿರ್ಮಿಸಿತು. 10. ವಿಶ್ವಕಪ್‌ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಸಾಧನೆಯನ್ನು ಕ್ರಿಸ್ ಗೇಲ್ ಮಾಡಿದ್ದಾರೆ. ಜಿಂಬಾಬ್ವೆ ವಿರುದ್ಧ 16 ಸಿಕ್ಸರ್ ಸಿಡಿಸಿ ಈ ಸಾಧನೆ ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ