ಪುಣೆ ಪಿಚ್ ಸರಿಯಿರಲಿಲ್ಲ ಎಂದು ಐಸಿಸಿಗೆ ದೂರು

ಬುಧವಾರ, 1 ಮಾರ್ಚ್ 2017 (10:06 IST)
ಪುಣೆ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯ ಮೂರೇ ದಿನಕ್ಕೆ ಮುಗಿದಿತ್ತು. ಇದಕ್ಕೆ ಕಳಪೆ ಪಿಚ್ ಕಾರಣ ಎಂಬ ಟೀಕೆಯೂ ವ್ಯಕ್ತವಾಗಿತ್ತು. ಮ್ಯಾಚ್ ರೆಫರಿ ಕೂಡಾ ಈ ಬಗ್ಗೆ ಐಸಿಸಿಗೆ ದೂರಿತ್ತಿದ್ದು, ಬಿಸಿಸಿಐಗೆ ವಿವರಣೆ ಕೋರಿ ನೋಟೀಸು ನೀಡಲಾಗಿದೆ.


ಐಸಿಸಿ ನಿಯಮದ ಪ್ರಕಾರ, ಪಂದ್ಯ ಮುಗಿದ ಬಳಿಕ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಪಿಚ್ ನ ಗುಣಮಟ್ಟದ ಬಗ್ಗೆ ವರದಿ ಸಲ್ಲಿಸಿದ್ದಾರೆ. ಅದರಂತೆ ಐಸಿಸಿ ಬಿಸಿಸಿಐಗೆ ಮುಂದಿನ 14 ದಿನಗಳೊಳಾಗಿ ಉತ್ತರ ನೀಡುವಂತೆ ನೋಟೀಸು ನೀಡಿದೆ.

ಪುಣೆ ಪಿಚ್ ಅವಾಂತರದ ನಂತರ ಎಚ್ಚೆತ್ತುಕೊಂಡಿರುವ ಬಿಸಿಸಿಐ ಬೆಂಗಳೂರಿನಲ್ಲಿ ಸ್ಪರ್ಧಾತ್ಮ ಪಿಚ್ ನಿರ್ಮಿಸಲು ಪಣ ತೊಟ್ಟಿದೆ. ಐದು ದಿನಗಳವರೆಗೆ ಪಂದ್ಯ ಮುಂದುವರಿಯುವಂತೆ ಬ್ಯಾಟ್ ಮತ್ತು ಬೌಲಿಂಗ್ ಗೆ ಸಹಾಯವಾಗುವಂತಹ ಪಿಚ್ ನಿರ್ಮಿಸುವುದಾಗಿ ಕೆಎಸ್ ಸಿಎ ಮೂಲಗಳು ಹೇಳಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ