ಆಕ್ರಮಣಕಾರಿ ಶೈಲಿ ಕಾಯ್ದುಕೊಳ್ಳಲು ಮೆಕಲಮ್ ಶಪಥ

ಶುಕ್ರವಾರ, 29 ಮೇ 2015 (12:57 IST)
ಲಾರ್ಡ್ಸ್ ಆರಂಭದ ಟೆಸ್ಟ್ ಪಂದ್ಯದಲ್ಲಿ 124 ರನ್ ಸೋಲನ್ನು ಅನುಭವಿಸಿದ್ದರೂ ಶುಕ್ರವಾರದಿಂದ ಹೆಡಿಂಗ್ಲೆಯಲ್ಲಿ ಆರಂಭವಾಗುವ ಸರಣಿಯ ಫೈನಲ್‌ನಲ್ಲಿ ತಮ್ಮ ತಂಡವು ದಾಳಿಯ ಶೈಲಿಯನ್ನು ಪುನಃ ಅನುಸರಿಸುತ್ತದೆಂದು ನ್ಯೂಜಿಲೆಂಡ್ ನಾಯಕ ಬ್ರೆಂಡನ್ ಮೆಕಲಮ್ ಹೇಳಿದ್ದಾರೆ. 
 
ಬೆನ್ ಸ್ಟೋಕ್ಸ್ ಅವರಿಗೆ ಬೌನ್ಸ್ ಎಸೆತಗಳನ್ನು ಪುನರಾವರ್ತಿಸಿದ ನ್ಯೂಜಿಲೆಂಡ್ ತಂತ್ರಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿದೆ. ಬೆನ್ ಸ್ಟೋಕ್ಸ್ 85 ಎಸೆತಗಳಲ್ಲಿ ಶತಕ ಬಾರಿಸಿದ್ದರಿಂದ ಬ್ಲಾಕ್ ಕ್ಯಾಪ್ಸ್‌ನ  6 ಟೆಸ್ಟ್‌ಗಳ ಅಜೇಯ ದಾಖಲೆಗೆ ತೆರೆಬಿದ್ದಿತ್ತು.  ಮೆಕೆಲಮ್ ತಮ್ಮ  ತಂಡದ ಬೌಲಿಂಗ್ ಶೈಲಿಯನ್ನು  ಸಮರ್ಥಿಸಿಕೊಂಡು, ಟೆಸ್ಟ್  ಪಂದ್ಯ ಗೆಲ್ಲುವುದಕ್ಕೆ ಅದೊಂದು ಅತ್ಯುತ್ತಮ ಅವಕಾಶ ಎಂದು ಹೇಳಿದ್ದರು. 
 
ನ್ಯೂಜಿಲೆಂಡ್ ತಂಡವು ಇದೇ ರೀತಿ ಆಡುತ್ತಿದ್ದು, ಕೆಲವು ಬಾರಿ ನಾವು ಸೋತಿದ್ದರೂ, ಇದು ಯಶಸ್ಸು ಪಡೆಯಲು ದೊಡ್ಡ ಮಾರ್ಗವಾಗಿದೆ ಎಂದು ಹೇಳಿದರು. 
ಲಾರ್ಡ್ಸ್ ಮೈದಾನದಲ್ಲಿ ಸೋತ ಬಗ್ಗೆ ಮಾತನಾಡುತ್ತಾ, ನಾವು ಉತ್ತಮ ಟೆಸ್ಟ್ ಪಂದ್ಯವಾಡಿದ್ದಾಗಿ ಈಗಲೂ ಭಾವಿಸಿದ್ದೇನೆ. ಆದರೆ ಸೋತಿದ್ದರಿಂದ ನಿರಾಶೆಯಾಗಿದ್ದರೂ 20 ವಿಕೆಟ್‌ಗಳನ್ನು ಕಬಳಿಸಿದ್ದಲ್ಲದೇ 730 ರನ್ ಸ್ಕೋರ್ ಮಾಡಿದ್ದೇವೆ.  ಬಹುತೇಕ ಸಂದರ್ಭಗಳಲ್ಲಿ ಟೆಸ್ಟ್ ಪಂದ್ಯವನ್ನು ಗೆಲ್ಲಿಸಿಕೊಡುತ್ತದೆ ಎಂದು ವಿಶ್ಲೇಷಿಸಿದರು. 

ವೆಬ್ದುನಿಯಾವನ್ನು ಓದಿ