ವಿಶ್ವಕಪ್ ಫೈನಲ್ ಬಳಿಕ ಏಕದಿನ ಪಂದ್ಯಗಳಿಗೆ ಕ್ಲಾರ್ಕ್ ವಿದಾಯ

ಶನಿವಾರ, 28 ಮಾರ್ಚ್ 2015 (10:33 IST)
ಸಿಡ್ನಿ: ಆಸ್ಟ್ರೇಲಿಯಾ ನಾಯಕ ಮೈಕೇಲ್ ಕ್ಲಾರ್ಕ್ ಭಾನುವಾರ ನ್ಯೂಜಿಲೆಂಡ್ ವಿರುದ್ಧ ವಿಶ್ವಕಪ್ ಸಮರದ ಬಳಿಕ ಏಕ ದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ. ಈ ಮೂಲಕ ತಮ್ಮ 12 ವರ್ಷಗಳ ಕ್ರಿಕೆಟ್ ವೃತ್ತಿಜೀವನಕ್ಕೆ  ತೆರೆಎಳೆಯಲಿದ್ದಾರೆ. 
 
ನಿವೃತ್ತಿಯಾಗಲು ನನಗೆ ಸೂಕ್ತಕಾಲವೆಂದು ಭಾವಿಸುತ್ತೇನೆ ಎಂದು 33 ವರ್ಷ ವಯಸ್ಸಿನ ಕ್ಲಾರ್ಕ್ ವರದಿಗಾರರಿಗೆ ತಿಳಿಸಿದರು.  ನಾನು ಮುಂದಿನ ವಿಶ್ವಕಪ್‌ಗೆ ಆಡಲು ಸಾಧ್ಯವೇ ಎಂದು ಮನಸ್ಸಿನಲ್ಲಿ ಯೋಚಿಸಿ ಅದು ಸಾಧ್ಯವಿಲ್ಲವೆಂದು 48 ಗಂಟೆಗಳ ಮುಂಚೆ ನಿರ್ದಾರ ಕೈಗೊಂಡೆ ಎಂದು ಹೇಳಿದರು. ಕ್ಲಾರ್ಕ್ 244 ಏಕ ದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದು, 7907 ರನ್ ಸ್ಕೋರ್ ಮಾಡಿದ್ದು, 130 ರನ್ ಅತ್ಯಧಿಕ ಸ್ಕೋರ್ ಮಾಡಿದ್ದಾರೆ.

ಏಕ ದಿನ ಪಂದ್ಯದಿಂದ ನಿವೃತ್ತಿಯಾದರೂ 8432 ರನ್‌ಗಳೊಂದಿಗೆ 108 ಟೆಸ್ ಪಂದ್ಯಗಳಲ್ಲಿ ಆಡಿದ್ದು, ಟೆಸ್ಟ್ ಪಂದ್ಯಗಳಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ಅವರ ಅತ್ಯಧಿಕ ಸ್ಕೋರ್ 329 ನಾಟೌಟ್. 

ವೆಬ್ದುನಿಯಾವನ್ನು ಓದಿ