ಟೀಂ ಇಂಡಿಯಾ ನಮ್ಮನ್ನೇ ಕಾಪಿ ಮಾಡಿರೋದು: ಮತ್ತೆ ನಾಲಿಗೆ ಹರಿಬಿಟ್ಟ ಮೈಕಲ್ ವಾನ್

Krishnaveni K

ಗುರುವಾರ, 3 ಅಕ್ಟೋಬರ್ 2024 (10:03 IST)
ಲಂಡನ್: ಬಾಂಗ್ಲಾದೇಶ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಕ್ರಮಣಕಾರೀ ಶೈಲಿ ಆಟದ ಬಗ್ಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ನಾಲಿಗೆ ಹರಿಬಿಟ್ಟಿದ್ದಾರೆ. ಭಾರತ ನಮ್ಮ ಆಟದ ಶೈಲಿಯನ್ನು ಕಾಪಿ ಮಾಡಿದೆ ಎಂದಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಮಳೆಯಿಂದಾಗಿ ಮೊದಲ ಮೂರು ದಿನ ಸರಿಯಾಗಿ ಪಂದ್ಯ ನಡೆಯಲೇ ಇಲ್ಲ. ಹಾಗಿದ್ದರೂ ಕೊನೆಯ ಎರಡು ದಿನಗಳಲ್ಲಿ ಭಾರತ ಟಿ20 ಶೈಲಿಯಲ್ಲಿ ಬ್ಯಾಟ್ ಬೀಸಿ ಅಸಾಧ್ಯವಾದ ಗೆಲುವು ತನ್ನದಾಗಿಸಿಕೊಂಡಿತ್ತು. ಇದನ್ನು ಗಮ್ ಬಾಲ್ (Gamball) ಎಂದು ಬಣ್ಣಿಸಲಾಗಿತ್ತು.

ಆದರೆ ಇದರಲ್ಲಿ ಹುಳುಕು ಕಂಡುಕೊಂಡ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಭಾರತ ನಮ್ಮ ಬೇಝ್ ಬಾಲ್ ಆಟದ ಶೈಲಿಯನ್ನು ಕಾಪಿ ಮಾಡಿದೆ ಎಂದಿದ್ದಾರೆ. ಟೀಂ ಇಂಡಿಯಾದ ಗಮ್ ಬಾಲ್ ಪಕ್ಕಾ ನಮ್ಮ ಬೇಝ್ ಬಾಲ್ ಆಟದ ಕಾಪಿ. ಬಹುಶಃ ರೋಹಿತ್ ಶರ್ಮಾ, ನಮ್ಮ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಗೆ ಕರೆ ಮಾಡಿ ಸಲಹೆ ಕೇಳಿರಬಹುದು. ಟೀಂ ಇಂಡಿಯಾ ಕೂಡಾ ನಮ್ಮ ರೀತಿ ಆಡುತ್ತಿರುವುದು ಗ್ರೇಟ್. ಭಾರತ ತಂಡ ಇಂಗ್ಲೆಂಡ್ ಕಾಪಿ ಮಾಡುತ್ತಿದೆ ಎಂದರೆ ಅದು ನಿಜಕ್ಕೂ ಗ್ರೇಟ್ ಎಂದಿದ್ದಾರೆ.

ಇನ್ನಷ್ಟು ಕುಹಕವಾಡಿರುವ ಅವರು ರೋಹಿತ್ ಬಹುಶಃ ಬೆನ್ ಸ್ಟೋಕ್ ಗೆ ಕರೆ ಮಾಡಿ ನಿಮ್ಮನ್ನು ನಾವು ಕಾಪಿ ಮಾಡಬಹುದೇ ಎಂದು ಕೇಳಿಬರಬಹುದು ಎಂದೆಲ್ಲಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ಹಿಂದೆಯೂ ಹಲವು ಬಾರಿ ಭಾರತ ತಂಡದ ಬಗ್ಗೆ ಕುಹುಕವಾಡಿ ಮೈಕಲ್ ವಾನ್ ನೆಟ್ಟಿಗರಿಂದ ಮಂಗಳಾರತಿ ಮಾಡಿಸಿಕೊಂಡ ಉದಾಹರಣೆಗಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ