ಐಪಿಎಲ್ ಕ್ಯಾಪ್ಟನ್ಸಿಯಲ್ಲಿ ಕೊಹ್ಲಿ ಫೈಲ್ ಎಂದ ಮೈಕಲ್ ವಾನ್

ಬುಧವಾರ, 13 ಅಕ್ಟೋಬರ್ 2021 (10:10 IST)
ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕತ್ವ ತ್ಯಜಿಸಿರುವ ವಿರಾಟ್ ಕೊಹ್ಲಿ ಸಾಧನೆ ಬಗ್ಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ, ಕ್ರಿಕೆಟ್ ವಿಶ್ಲೇಷಕ ಮೈಕಲ್ ವಾನ್ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

 
‘ಅವರ ನಾಯಕತ್ವದ ಸಾಧನೆಯ ಪುಸ್ತಕದಲ್ಲಿ ಟ್ರೋಫಿ ಗೆಲ್ಲಲಾಗದ ಅಂಶ ಯಾವತ್ತಿಗೂ ಉಳಿದುಕೊಳ್ಳಲಿದೆ. ಇಂತಹ ಪ್ರಮುಖ ಟೂರ್ನಿಗಳಲ್ಲಿ ಗೆಲುವುಗಳು, ಚಾಂಪಿಯನ್ ಆಗುವುದು ಮುಖ್ಯವಾಗುತ್ತದೆ. ಅದಿಲ್ಲದೇ ಹೋದಾಗ ಅವರನ್ನು ಅವರು ಫೈಲ್ಡ್ ಕ್ಯಾಪ್ಟನ್ ಎಂದೇ ಹೇಳಬೇಕಾಗುತ್ತದೆ. ಅಂತಹ ಒಳ್ಳೆಯ ಆಟಗಾರನಾಗಿ ಟ್ರೋಫಿಯಿಲ್ಲದೇ ಬರಿಗೈಯಲ್ಲಿ ಇರುವುದು ಖದಕರ’ ಎಂದಿದ್ದಾರೆ ವಾನ್.

ಅದರಲ್ಲೂ ಈ ಐಪಿಎಲ್ ನಲ್ಲಿ ಆರ್ ಸಿಬಿ ಎಲ್ಲಾ ವಿಭಾಗದಲ್ಲೂ ಅತ್ಯುನ್ನತ ಆಟಗಾರರನ್ನು ಹೊಂದಿತ್ತು. ಟೂರ್ನಿಗೆ ಚೆನ್ನಾಗಿ ತಯಾರಾಗಿತ್ತು. ಹಾಗಿದ್ದರೂ ಕಪ್ ಗೆಲ್ಲಲಾಗದೇ ಹೋಗಿದ್ದು ದುರದೃಷ್ಟಕರ ಎಂದು ವಾನ್ ಸಂದರ್ಶನವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ