ಆರ್ ಸಿಬಿ ಕಪ್ ಗೆಲ್ಲದೇ ಇರಲು ಫ್ಯಾನ್ಸ್ ಹೇಳಿದ ಎರಡು ಕಾರಣ

ಮಂಗಳವಾರ, 12 ಅಕ್ಟೋಬರ್ 2021 (16:58 IST)
ದುಬೈ: ಐಪಿಎಲ್ 14 ರಲ್ಲೂ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಪ್ ಗೆಲ್ಲುವ ಕನಸು ನನಸಾಗಲೇ ಇಲ್ಲ. ಇದಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಎರಡು ಮುಖ್ಯ ಕಾರಣ ಕೊಟ್ಟಿದ್ದಾರೆ.


ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧದ ಪ್ಲೇ ಆಫ್ ಪಂದ್ಯದಲ್ಲಿ ಟಾಸ್ ಗೆದ್ದು ವಿರಾಟ್ ಪಡೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ್ದು ಅತ್ಯಂತ ದೊಡ್ಡ ತಪ್ಪು ಎಂಬುದು ಫ್ಯಾನ್ಸ್ ನ ಮೊದಲ ಕಾರಣ.

ಇನ್ನು, ಬೌಲಿಂಗ್ ನಲ್ಲಿ ಫಾರ್ಮ್ ನಲ್ಲಿಲ್ಲದ ಜಾರ್ಜ್ ಗಾರ್ಟನ್ ಗೆ ಪದೇ ಪದೇ ಅವಕಾಶ ನೀಡಿದ್ದೇಕೆ? ಫಾರ್ಮ್ ನಲ್ಲಿರುವ ಬೌಲರ್ ಗಳಿಗೆ ನಿರ್ಣಾಯಕ ಹಂತದಲ್ಲಿ ಹೆಚ್ಚು ಬೌಲಿಂಗ್ ಅವಕಾಶವನ್ನೇ ನೀಡದಿರುವುದು ಈ ಸೋಲಿಗೆ ಕಾರಣ ಎಂದು ಅಭಿಮಾನಿಗಳು ಅಭಿಪ್ರಾಯಪಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ