ಸೆಪ್ಟೆಂಬರ್‌ನಲ್ಲಿ ಮಿನಿ ಐಪಿಎಲ್ ವಾಸ್ತವರೂಪ ಸಾಧ್ಯತೆ

ಶುಕ್ರವಾರ, 3 ಜುಲೈ 2015 (15:46 IST)
ಚಾಂಪಿಯನ್ಸ್ ಲೀಗ್ ಟ್ವೆಂಟಿ 20ಗೆ ಪರ್ಯಾಯವನ್ನು ಕುರಿತು ಚರ್ಚಿಸಲು ಐಪಿಎಲ್ ಆಡಳಿತ ಮಂಡಳಿ ಜುಲೈ 8ರಂದು ಸಭೆ ನಡೆಸುವ ಸಂಭವವಿದೆ. ಸಿಎಲ್‌ಟಿ20ಗೆ ಅಧಿಕೃತವಾಗಿ ಇನ್ನೂ ವಿರಾಮ ನೀಡಿಲ್ಲ.
 
ಸಿಎಲ್‌ಟಿ‌ 20 ಆಡಳಿತ ನಿರ್ವಹಿಸುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವೇಲ್ಸ್ ಕ್ರಿಕೆಟ್ ಮಂಡಳಿ ಪಂದ್ಯಾವಳಿಯ ಪ್ರಸಾರಕರ ಜೊತೆ ನಿರ್ಗಮನ ನಿಯಮಕ್ಕೆ ಸಹಿ ಹಾಕಿದೆ. ಸಿಎಲ್‌ಟಿ 20- ವಾಸ್ತವವಾಗಿ ರದ್ದಾದರೆ, ಐಪಿಎಲ್‌ನ ಮಿನಿ ಸ್ವರೂಪದ ಕ್ರಿಕೆಟ್‍‌ನೊಂದಿಗೆ ಬಿಸಿಸಿಐ ಯೋಜನೆ ರೂಪಿಸಿದ್ದು, ಯುಎಇನಲ್ಲಿ ಸೆಪ್ಪೆಂಬರ್‌ನಲ್ಲಿ ಅದರ ಉದ್ಘಾಟನಾ ಸೆಷನ್ ಆರಂಭವಾಗುತ್ತದೆ. ಇದಲ್ಲದೇ ಬಿಸಿಸಿಐ ವೆಸ್ಟ್ ಇಂಡೀಸ್ ಭಾರತ ಪ್ರವಾಸದಿಂದ ಹಿಂದೆ ಸರಿದಿದ್ದರಿಂದ ವೆಸ್ಟ್ ಇಂಡೀಸ್ ವಿರುದ್ಧ ಕಿರುಸರಣಿಯನ್ನು ನಡೆಸಲು ಬಿಸಿಸಿಐ ಯೋಜಿಸಿದೆ. 
 
ಆದರೆ ಐಪಿಎಲ್ ಕಿರು ಸ್ವರೂಪದ ಆಟದ ದೋಷದ ಅಂಶವೇನೆಂದರೆ ಅದರ ಪ್ರಸಾರಕ್ಕೆ ಸಂಬಂಧಿಸಿದಂತೆ ತರುವಾಯದ ಪರಿಣಾಮವನ್ನು ಪರಿಗಣಿಸುವುದಾಗಿದೆ. ಮಿನಿ ಐಪಿಎಲ್ ಪ್ರಸಾರವನ್ನು  ಬೇರಾವುದೇ ಪ್ರಸಾರಕರಿಗೆ ನೀಡಿದರೆ,  ಐಪಿಎಲ್ ಪ್ರಸಾರ ಮಾಡುವ ಮ್ಯಾಕ್ಸ್ ಮ್ತತು ಸಿಕ್ಸ್ ಮಾಲೀಕ ಮಲ್ಟಿ ಸ್ಕ್ರೀನ್ ಮೀಡಿಯಾ ಕಾಂಪೀಟೇಷನ್ ಕಮೀಷನ್‌ಗೆ ಅಪೀಲು ಮಾಡುವ ಸಾಧ್ಯತೆಯಿದೆ. ಆದ್ದರಿಂದ ಬಿಸಿಸಿಐ ಅಧಿಕಾರಿಗಳು ಪ್ರಸಾರ ಹಕ್ಕುಗಳನ್ನು ನೀಡಲು ಪಾರದರ್ಶಕ ವಿಧಾನ ಅನುಸರಿಸುವ ಮೂಲಕ ವಿಷಯವನ್ನು ಬಗೆಹರಿಸುವ ಬಗ್ಗೆ ವಿಶ್ವಾಸ ಹೊಂದಿದೆ. 

ವೆಬ್ದುನಿಯಾವನ್ನು ಓದಿ