ಮಿಚೆಲ್ ಜಾನ್ಸನ್ , ಹ್ಯಾಜಲ್ ವುಡ್‌‌ಗೆ ಬಾಂಗ್ಲಾ ಟೆಸ್ಟ್ ಸರಣಿ ಮಿಸ್

ಗುರುವಾರ, 3 ಸೆಪ್ಟಂಬರ್ 2015 (21:27 IST)
ಆಸ್ಟ್ರೇಲಿಯಾದ ವೇಗಿಗಳಾದ ಮಿಚೆಲ್ ಜಾನ್ಸನ್ ಮತ್ತು ಜೋಶ್ ಹ್ಯಾಜಲ್‌ವುಡ್ ಅವರು ಬ್ಯುಸಿ ಬೇಸಿಗೆ ವೇಳಾಪಟ್ಟಿಗೆ ಮುನ್ನ ಬಾಂಗ್ಲಾದೇಶದ ಟೆಸ್ಟ್ ಸರಣಿ ಮುಂದಿನ ತಿಂಗಳು ಮಿಸ್ ಮಾಡಿಕೊಳ್ಳಲಿದ್ದಾರೆ.
 
ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಸ್ವದೇಶಿ ಸರಣಿಗಳು ಇರುವುದರಿಂದ ತಮ್ಮ ವೇಗಿಗಳನ್ನು ಎಚ್ಚರಿಕೆಯಿಂದ ನಿರ್ವಹಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಉದ್ದೇಶಿಸಿದೆ. ಆಸ್ಟ್ರೇಲಿಯಾ ಭಾರತದ ವಿರುದ್ಧ ಒಂದು ದಿನದ ಸರಣಿ ಮತ್ತು ಎರಡು ಟೆಸ್ಟ್‌ಗಳನ್ನು ನ್ಯೂಜಿಲೆಂಡ್‌ನಲ್ಲಿ ಆಡಲಿದೆ. ಆಯ್ಕೆದಾರರು ಮುಂದಿನ ಕೆಲವು ವಾರಗಳಲ್ಲಿ ಬಾಂಗ್ಲಾದೇಶ ಪ್ರವಾಸ ಕುರಿತು ಭೇಟಿಯಾಗಲಿದ್ದಾರೆ.
 
 ಮಿಚೆಲ್ ಜಾನ್ಸನ್ ಮತ್ತು ಹ್ಯಾಜಲ್ ವುಡ್ ಭಾರೀ ಆಟದ ಒತ್ತಡಕ್ಕೆ ಒಳಗಾಗಿದ್ದು, ಇಡೀ ಅವಧಿಯಲ್ಲಿ ಅವರು ಯಶಸ್ಸು ಗಳಿಸಬೇಕಾದರೆ ನಾವು ಅವರನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದು ತಂಡದ ನಿರ್ವಹಣೆ ಮ್ಯಾನೇಜರ್ ಪ್ಯಾಟ್ ಹೋವಾರ್ಡ್ ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ